ಬೈಂದೂರು : ಕಿರಿಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯ ನಾಗೂರಿನ ಬಾವಿ ಒಂದರಲ್ಲಿ ಮಂಗಳವಾರ ಮಧ್ಯಾಹ್ನ ಮೊಸಳೆ ಪ್ರತ್ಯಕ್ಷವಾಗಿದೆ. ನಾಗೂರು ಗ್ರಾಮದ ಒಡೆಯರ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ದಿಢೀರನೆ ಮೊಸಳೆ ಕಾಣಿಸಿಕೊಂಡಿದ್ದು ಬೈಂದೂರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸಿದರು.ಸ್ಥಳೀಯರ ಸಹಾಯದಿಂದ ಮೊಸಳೆಗೆ ಬೋನು ಇಟ್ಟು ಬಾವಿಯ ಸುತ್ತಲೂ ಸಿ.ಸಿ ಕ್ಯಾಮೆರಾವನ್ನು ಅಳವಡಿಸಿ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದ್ದು ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಮೊಸಳೆ ಬೊನಿಗೆ ಕೋಳಿಯ ಮಾಂಸವನ್ನು ಹಾಕಿ ಸದ್ಯಕ್ಕೆ ಇಡಲಾಗಿದೆ
ಮೊಸಳೆಯನ್ನುಹಿಡಿಯಲು ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮೊಸಳೆ ಬಾವಿಯಲ್ಲಿ ಇರುವ ಮಾಹಿತಿ ಸಿಕ್ಕಿದಂತೆ ಸಾವಿರಾರು ಜನರು ಮೊಸಳೆ ನೋಡಲು ಬರುತ್ತಿದ್ದಾರೆ. ಜನರು ತಡೆಯಲು ಪೊಲಿಸ್ ಇಲಾಖೆ ಬಿಗಿ ಭದ್ರತೆ ಮಾಡಿದ್ದಾರೆ. ಕ್ಯಾಮೆರಾದ ಮೂಲಕ ಮೊಸಳೆಯ ಚಲನ ವಲನದ ಬಗ್ಗೆ ನಿಗ್ಗಾ ಇಡಲಾಗಿದೆ.