ಕೋಟ : ಇಲ್ಲಿನ ಕೋಟ ಹೋಬಳಿ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳಲ್ಲಿ ಎರಡನೇ ಬೆಳೆ ಮರಿಚಿಕೆಯಾಗಿದೆ.
ಸಾಮಾನ್ಯವಾಗಿ ಭತ್ತ ಕಟಾವುಗೊಂಡ ನಂತರ ಶೇಂಗಾ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಮೊರೆ ಹೋಗಿರುವ ರೈತ ಸುಮುದಾಯಕ್ಕೆ ಈ ಬಾರಿ ವಾತಾವರಣದ ವೈಪರೀತ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಕೃಷಿ ಕಾಯಕವನ್ನೆ ಅವಲಂಬಿತವಾದ ರೈತ ಸಮುದಾಯ ಸಾಲದ ಸುಳಿಯಲ್ಲಿ ಬಿಳುವಂತ್ತಾಗಿದೆ.ಸಾಮಾನ್ಯವಾಗಿ ವಾತಾವರಣಕ್ಕೆ ಹೊಂದಿಕೊಂಡು ಆಯಾ ಮಣ್ಣಿನ ತೇವಾಂಶದ ಅನುಗುಣವಾಗಿ ವಿವಿಧ ಬೆಳೆಗಳನ್ನು ಈ ಕರಾವಳಿ ಸೇರಿದಂತೆ ಒಳನಾಡಿನ ಕೆಲ ಪ್ರದೇಶದಲ್ಲಿ ಬೆಳೆಯುತ್ತಾರೆ ಅದರಲ್ಲಿ ಹೆಚ್ಚಾಗಿ ಶೇಂಗಾ ಅವಲಂಬನೆಯೇ ಹೆಚ್ಚು ಈ ದಿಸೆಯಲ್ಲಿ ಆಯಾ ರೈತ ಸಂಪರ್ಕಕೇಂದ್ರದಲ್ಲಿಈಗಾಲೇ ಶೇಂಗಾ ಬೀಜ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳು ಶೇಖರಣೆಯಾಗಿ ರೈತರತ್ತ ಮುಖ ಮಾಡಿ ನಿಂತಿದೆ ಅಲ್ಲದೆ ಹೆಚ್ಚಿನ ಕೃಷಿಕರು ಖರೀದಿಸಿ ಬಿತ್ತನೆಗೊಳಿಸಿದ್ದಾರೆ ಆದರೆ ಅಕಾಲಿಕ ಮಳೆರಾಯನ ಆರ್ಭಟದ ನಡುವೆ ರೈತ ಮಂಕಾಗಿ ಕುಳಿತುಕೊಳ್ಳುವಂತೆ ಮಾಡಿದೆ.
ಶೇಂಗಾ,ಉದ್ದು,ಅವಡೆ ಕೊಳತು ಭಸ್ಮ
ಪ್ರಸ್ತುತ ಭತ್ತದ ಕಟಾವಿನ ನಂತರ ಕೋಟ,ಕೋಟತಟ್ಟು ,ತೆಕ್ಕಟ್ಟೆ, ಸಾಲಿಗ್ರಾಮ ಸೇರಿದಂತೆ ವಿವಿಧ ಭಾಗಗಳಲ್ಲಿ ಈಗಾಗಲೇ ಉದ್ದು,ಶೇಂಗಾ ಬೀಜ ಸೇರಿದಂತೆ ವಿವಿಧ ಧಾನ್ಯಗಳ ಬಿತ್ತನೆ ಕಾರ್ಯಗಳು ನಡೆದಿದ್ದು ಅವುಗಳು ಫೆಂಗಲ್ ಚಂಡಮಾರುತದ ಹೊಡತಕ್ಕೆ ಕೊಳತು ಭಸ್ಮವಾಗಿದೆ.ಬೆಳೆಗಳನ್ನೆ ಅವಲಂಬಿಸಿ ಬದುಕುವ ರೈತನ ಬದುಕು ಭವಣೆಗಳನ್ನು ಆಲಿಸುವವರಿಲ್ಲದಾಗಿದೆ.
ಕಣ್ಮುಚ್ಚಿ ಕುಳಿತ ಸರಕಾರ
ಕೋಟ ಹೋಬಳಿಯೊಂದರಲ್ಲಿ 1975 ಹೆಕ್ಟೇರ್ ಕೃಷಿ ಭೂಪ್ರದೇಶ ಎರಡನೇ ಬೆಳೆಗೆ ಸಿದ್ಧಗೊಂಡಿದ್ದು ಇದರಲ್ಲಿ ಶೇ.40ರಷ್ಟು ಬೆಳೆಗಳು ಚಂಡಮಾರುತದ ಪ್ರಭಾವಕ್ಕೆ ನೆಲಕಚ್ಚಿದೆ ,ಇನ್ನುಳಿದ ಭೂಭಾಗಳು ಸೇರಿದಂತೆ ವಿವಿಧ ಪ್ರದೇಶದಲ್ಲಿ ಬಿತ್ತನೆ ಮರಿಚಿಕೆ ಈ ಹಿನ್ನಲ್ಲೆಯಲ್ಲಿ ಕೃಷಿಯನ್ನೆ ಅವಲಂಬಿತನಾದ ರೈತನ ಪಾಡೇನು ಕೇಂದ್ರ ಹಾಗೂ ರಾಜ್ಯ ಸರಕಾರವಾಗಲಿ, ಇಲಾಖೆಯಾಗಲಿ ರೈತ ಸಮುದಾಯದ ಗೋಳನ್ನು ಆಲಿಸಲು ನಿರಾಸಕ್ತಿ ತೊರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಬೇಕಿದೆ ಸರಕಾರದ ಅಭಯ
ದೇಶದ ಬೆನ್ನೆಲು ರೈತ ಎನ್ನುವ ಶೀರ್ಷಿಕೆ ಪ್ರತಿಯೊಂದು ಕಣಕಣವು ಹೇಳುತ್ತದೆ ಆದರೆ ಆ ರೈತ ಸಮುದಾಯದ ನೋವುಗಳನ್ನು ಅಥವಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರಗಳು ಎಡೆವುತ್ತಿವೆ,ರೈತ ಸಮುದಾಯ ತಮ್ಮ ಜಮೀನುಗಳಲ್ಲಿ ಉಳುಮೆಕಾರ್ಯದಿಂದ ಹಿಡಿದು ಬಿತ್ತನೆಕಾರ್ಯ ಮುಗಿಸುವವರೆಗೆ ಸಾಕಷ್ಟು ಹಣ ವ್ಯಯಿಸುತ್ತಾನೆ ಆದರೆ ಕಾಲಕ್ಕನುಗುಣವಾಗಿ ವಾತಾವರಣ ಹೊಂದಿಕೊAಡು ಬೆಳೆ ಉತ್ತಮವಾಗಿ ಬಂದರೂ ಸಮರ್ಪಕ ದರ ಸಿಗದೆ ಶೋಚನೀಯ ಸ್ಥಿತಿಗೆ ತಲುಪುತ್ತಾನೆ, ಇನ್ನೊಂದೆಡೆ ವಾತಾವರಣ ವ್ಯತ್ಯಾಸಗಳಿಂದ ಬೆಳೆಗೆ ಸಂಚಕಾರ ತಂದೊಡ್ಡುತ್ತದೆ.ಹೀಗಾದರೆ ರೈತ ಸಮುದಾಯದ ಬೆನ್ನಿಗೆ ನಿಲ್ಲುವರಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ರೈತನ ಆರ್ಥಿಕ ಸ್ಥಿತಿಗೆ ಹೊಡೆತ
ಕೃಷಿಯನ್ನೆ ಅವಲಂಬಿತನಾದ ರೈತಸಮುದಾಯ ಬೆಳೆ ಸಾಲಗಳನ್ನು ಮಾಡುತ್ತಾನೆ ಈ ರೀತಿಯ ವಾತಾವರಣದ ವೈಪರೀತ್ಯಕ್ಕೆ ಒಳಗಾಗಿ ಕೃಷಿ ಸಾಲಗಳ ಗತಿ ಏನು ? ರೈತಸಮುದಾಯದ ಆರ್ಥಿಕಸ್ಥಿತಿ ಚಿಂತಾಜನಕ ವ್ಯವಸ್ಥೆಗೆ ತಳ್ಳಲ್ಪಡುತ್ತದೆ.ಈ ಹಿನ್ನಲ್ಲೆಯಲ್ಲಿ ಸಂಬAಧಿಸಿದ ಇಲಾಖೆ,ಸರಕಾರ ರೈತ ಸಮುದಾಯದ ನೆರವಿಗೆ ಧಾವಿಸಬೇಕಿದೆ.
ಮಣೂರು ಭಾಸ್ಕರ ಶೆಟ್ಟಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಹಿರಿಯ ಕೃಷಿಕರು.
ವಾತಾವರಣ ವೈಪರೀತ್ಯಕ್ಕೆ ಕೋಟ ಹೋಬಳಿ ಭಾಗದ ೧೯೭೫ ಹೆಕ್ಟೇರ್ ಕೃಷಿ ಭೂಮಿಯಲ್ಲಿ ೧೫ರಿಂದ ೨೦ ಎಕ್ಕರೆ ಕೃಷಿ ಭೂ ಪ್ರದೇಶದ ಧಾನ್ಯಗಳು ಹಾನಿಗೊಂಡ ಬಗ್ಗೆ ಮಾಹಿತಿ ಲಭಿಸಿದೆ,ಆ ಪ್ರದೇಶಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಕೆಲವು ಭಾಗಗಳಿಗೆ ಭೇಟಿ ನೀಡಲಾಗಿದೆ.ಅಲ್ಲದೆ ಈವರೆಗೆ ಹಾನಿಗೊಂಡ ಬಗ್ಗೆ ರೈತಾಪಿವರ್ಗದಿಂದ ಅರ್ಜಿ ಬಂದಿಲ್ಲ ಸಂಬAಧಿಸಿದ ಪಂಚಾಯತ್ ಅಲ್ಲಿನ ಕಂದಾಯ ಇಲಾಖೆಗೆ ಮಾಹಿತಿ ಕೇಳಲಾಗಿದೆ ಅರ್ಜಿ ಬಂದ ಕೂಡಲೇ ನಮ್ಮ ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು..ಶೇಂಗಾ ದಾಸ್ತಾನು ೧೦೦ ಕ್ವಿಂಟಾಲ್ ಇರಿಸಲಾಗಿದ್ದು ೨೫೦ ಕ್ವೀಂಟಾಲ್ ಇಂಡೆAಟ್ ನೀಡಲಾಗಿದೆ
ಸುಪ್ರಭ ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ.