Home » ನಮ್ಮ ಸರ್ಕಾರ ಬಡವರಿಗೆ ಅನ್ಯಾಯ ಮಾಡಲ್ಲ
 

ನಮ್ಮ ಸರ್ಕಾರ ಬಡವರಿಗೆ ಅನ್ಯಾಯ ಮಾಡಲ್ಲ

ಡಿ ಕೆ ಶಿವಕುಮಾರ್

by Kundapur Xpress
Spread the love

ಕುಂದಾಪುರ : ಉಪ ಚುನಾವಣಾ ಫಲಿತಾಂಶದ ಬಗ್ಗೆ ಯಾವುದೇ ಯೋಚನೆ ಇಲ್ಲ ಕರ್ಮಣೇ ವಾಧಿಕಾರಸ್ತೆ ಮಾ ಫಲೇಶು ಕದಾಚನ ಎನ್ನುವ ಮಾತುಗಳಲ್ಲಿ ವಿಶ್ವಾಸ ಇದೆ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ದೇವರ ಫಲಕ್ಕೆ ಕಾಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು

ಚುನಾವಣಾ ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಸಮೀಕ್ಷೆಗಳು ನಡೆಯುತ್ತವೆ. ಸಮೀಕ್ಷೆಗಳು ಏನಾಯ್ತು ? ಯುಪಿ ಹರಿಯಾಣದಲ್ಲಿ ಏನಾಯ್ತು ಸಮೀಕ್ಷೆ ಕಟ್ಟಿಕೊಂಡು ರಾಜಕೀಯ ಮಾಡೋಕೆ ಆಗಲ್ಲ ಸಮೀಕ್ಷೆಯವರ ಸಿಸ್ಟಮ್ ಬೇರೆಯೇ ಇರುತ್ತದೆ. ನಮ್ಮ ನಿರೀಕ್ಷೆ ಬೇರೇಯೇ ಇರುತ್ತದೆ. ಜನರ ಹೃದಯ ಗೆದ್ದವರು ವಿಶ್ವಾಸ ಗೆದ್ದವರು ಗೌಪ್ಯ ಮತದಾನದಲ್ಲಿ ಗೆಲ್ಲುತ್ತಾರೆ ಎಂದರು.

ಚುನಾವಣೆಗೆ ಮುಂಚಿತವಾಗಿ ದೇವಸ್ಥಾನಕ್ಕೆ ಬಂದಿದ್ದೆವು. ದೇವರಿಗೆ ಸಲ್ಲಿಸಿದ ಪ್ರಾರ್ಥನೆಯಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಐದು ಗ್ಯಾ ಗ್ಯಾರೆಂಟಿ ಕೊಡಲು, ಆಡಳಿತ ಮಾಡಲು ತಾಯಿ ಮೂಕಾಂಬಿಕೆ ಅವಕಾಶ ಕೊಟ್ಟಿದ್ದಾಳೆ ಇಡಗುಂಜಿ ಗಣಪತಿ, ಮುರುಡೇಶ್ವರ ಶಿವನ ದರ್ಶನವನ್ನೂ ಮಾಡುತ್ತೇನೆ. ಎಲ್ಲ ಕಡೆ ದೇವರು ಒಳ್ಳೇದು ಮಾಡುತ್ತಾನೆ ಎಂಬ ನಂಬಿಕೆ ಹಾಗೂ ವಿಶ್ವಾಸ ಇದೆ 

ಕೊಲ್ಲೂರು ಶ್ರೀ ದೇವಿಯ ಸನ್ನಿಧಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸರ್ಕಾರದ ಪ್ರತಿನಿಧಿಯಾಗಿ ಹಾಗೂ ಉಪಮುಖ್ಯಮಂತ್ರಿಯಾದ ನಾನು ಹೇಳುತ್ತಿದ್ದೇನೆ. ರಾಜ್ಯದ ಯಾವುದೇ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಡಿ.ಕೆ. ಶಿವಕುಮಾ‌ರ್ ಭರವಸೆ ವ್ಯಕ್ತಪಡಿಸಿದರು.

ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಪೊಲೀಸರು ಪೊಲೀಸರ ಕೆಲಸವನ್ನು ಮಾಡುತ್ತಾರೆ. ಗೃಹ ಸಚಿವ ಪರಮೇಶ್ವರ್ ಅವರ ಕೆಲಸ ಮಾಡ್ತಾರೆ. ನಾನು ರಾಜ್ಯದಲ್ಲಿ ನನ್ನ ಕೆಲಸ ಮಾಡುತ್ತೇನೆ. ರಾಜ್ಯದ ಜನರನ್ನು ರಕ್ಷಣೆ ಮಾಡೋದು ನಮ್ಮೆಲ್ಲರ ಕೆಲಸ. ಕೇರಳ ಹಾಗೂ ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಸರ್ಕಾರದ ಎಲ್ಲ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ನಾನು ಹೆಚ್ಚು ಮಾತಾಡಲ್ಲ ಎಂದರು.

ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಯು.ಬಿ. .ಶೆಟ್ಟಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಶ್‌ ಕಾರಂತ್‌ ಎಂ.ಎ.ಗಫೂರ್, ಅಶೋಕ್‌ ಕುಮಾರ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ಕಾಂಚನ್, ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಹಾಗೂ ಪ್ರದೀಪ್ ಕುಮಾರ್‌ಶೆಟ್ಟಿ ಗುಡಿಬೆಟ್ಟು ಉಪಸ್ಥಿತರಿದ್ದರು

   

Related Articles

error: Content is protected !!