Home » ಕೊಲ್ಲೂರು ಪ್ರಧಾನ ತಂತ್ರಿ ಶ್ರೀ ಮಂಜುನಾಥ ಅಡಿಗ ನಿಧನ
 

ಕೊಲ್ಲೂರು ಪ್ರಧಾನ ತಂತ್ರಿ ಶ್ರೀ ಮಂಜುನಾಥ ಅಡಿಗ ನಿಧನ

by Kundapur Xpress
Spread the love

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ತಂತ್ರಿ ಹಾಗೂ ಅರ್ಚಕರಾದ ಶ್ರೀ ಮಂಜುನಾಥ ಅಡಿಗ ಅವರು   ಕೊಲ್ಲೂರಿನ ತಮ್ಮ ಸ್ವಗ್ರಹದಲ್ಲಿ ಬ್ರಹೈಕ್ಯರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಶ್ರೀ ಮಂಜುನಾಥ ಅಡಿಗರು ಕೊಲ್ಲೂರು ದೇವಾಲಯದ ಪ್ರಖ್ಯಾತ ತಂತ್ರಿಗಳಾಗಿದ್ದು ದೇವಾಲಯದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಧಾನ ಮಾರ್ಗದರ್ಶಕರಾಗಿದ್ದರು.

ವೇದ, ತಂತ್ರ, ಆಗಮ ಸೇರಿದಂತೆ ಧಾರ್ಮಿಕ ವಿಚಾರಗಳ ಆಳ ಅಧ್ಯಯನ ಹಾಗೂ ಜ್ಞಾನಕ್ಕೆ ಪ್ರಸಿದ್ದಿಯಾಗಿದ್ದರು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಶ್ರೀಯುತರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದರು. ಕೊಲ್ಲೂರು ದೇವಾಲಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರೀಯುತರ ಕೊಡುಗೆ ಅಪಾರವಾಗಿದ್ದು ಶ್ರೀಯುತರ ಪುತ್ರ ಡಾ.ಶ್ರೀ ನಿತ್ಯಾನಂದ ಅಡಿಗ ದೇವಾಲಯದ ಪ್ರಧಾನ ತಂತ್ರಿ ಹಾಗೂ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯದ ಕರ್ತವ್ಯದಲ್ಲಿದ್ದಾರೆ. ಶ್ರೀ ಮಂಜುನಾಥ ಅಡಿಗರ ನಿಧನ ವೈದಿಕ-ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು ಶ್ರೀಯುತರ ನಿಧನಕ್ಕೆ ಕೊಲ್ಲೂರು ದೇವಾಲಯ ಆಡಳಿತ ಮಂಡಳಿ-ಸಿಬ್ಬಂದಿ ವರ್ಗ,ವೈದಿಕ ವರ್ಗ ಹಾಗೂ,ಶಿಷ್ಯ ವರ್ಗ ತೀವ್ರ ಸಂತಾಪ ಸೂಚಿಸಿದೆ.

 

 

Related Articles

error: Content is protected !!