253
ಕುಂದಾಪುರ : ಕುಂದಾಪುರ ನಗರದ ಪ್ರಕಾಶ್ ರೇಡಿಯೋ ಸಂಸ್ಥೆಯ ಮಾಲಕ ಹಾಗೂ ನೇರಂಬಳ್ಳಿ ನಿವಾಸಿಯಾದ ಪ್ರಕಾಶ್ ರಾವ್ ರವರು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗೆ 65 ವರ್ಷ ವಯಸ್ಸಾಗಿತ್ತು
ಕುಂದಾಪುರ ನಗರದ ಈಗಿನ ಹಳೇ ಬಸ್ಟ್ಯಾಂಡ ವಠಾರದಲ್ಲಿ 80ರ ದಶಕದಲ್ಲೇ ರೇಡಿಯೋ ಮಳಿಗೆಯನ್ನು ಆರಂಭಿಸಿದ್ದರು ಅವರು ರೇಡಿಯೋ, ಟೇಪ್ ರೆಕಾರ್ಡರ್ ದುರಸ್ತಿಯಲ್ಲಿ ಖ್ಯಾತರಾಗಿದ್ದು ಸಾಂಪ್ರದಾಯಿಕ ಹುಲಿ ವೇಷ ಕುಣಿತದಲ್ಲೂ ಗಮನ ಸೆಳೆಯುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪುರಸಭಾ ಅಧ್ಯಕ್ಷರಾದ ಮೋಹನ್‌ದಾಸ್ ಶೆಣೈ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

