585
ಕುಂದಾಪುರ : ಸಮೀಪದ ಗಂಗೊಳ್ಳಿ ಪೊಲೇಸ್ ಠಾಣಾ ವ್ಯಾಪ್ತಿಯ ಮೊವಾಡಿ ಬಳಿಯಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಪಾಗಾರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ ಮೃತಪಟ್ಟ ಯುವಕ ಮೊವಾಡಿ ನಿವಾಸಿ ಕೃಷ್ಣ ಮೊಗವೀರ ಇವರ ಪುತ್ರನಾದ ನಿತಿನ್ ಮೊಗವೀರ (26 ವರ್ಷ) ಎಂದು ತಿಳಿದು ಬಂದಿದೆ
ಮೊವಾಡಿ ನಿವಾಸಿಯಾದ ಕೃಷ್ಣ ಮೊಗವೀರ ಇವರ ಪುತ್ರನಾದ ನಿತಿನ್ ಎಂಬವರು ರಾತ್ರಿ 8.00 ಗಂಟೆಯ ಸುಮಾರಿಗೆ ತನ್ನ ತಂಗಿಯನ್ನು ಬೈಕಿನಲ್ಲಿ ಕುಂದಾಪುರದ ಬಸ್ಟ್ಯಾಂಡಿಗೆ ಬಿಟ್ಟು ಮನೆಗೆ ಮನೆಗೆ ಮರಳುವಾಗ ಈ ಘಟನೆ ಸಂಭವಿಸಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

