206
ತೋನ್ಸೆ ಜಯಂತ್ ಕುಮಾರ್ ನಿಧನ
ಉಡುಪಿ : ಯಕ್ಷಗಾನ ಭಾಗವತರು ಹಾಗೂ ಯಕ್ಷ ಗುರುಗಳಾಗಿದ್ದ ತೋನ್ಸೆ ಜಯಂತ್ ಕುಮಾರ್ (78 ವರ್ಷ)ಸೋಮವಾರ ನಿಧನ ಹೊಂದಿದರು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಸಂಚಾರಿ ಯಕ್ಷಗಾನ ಬಂಡಾರ ತೋನ್ಸೆ ಕಾಂತಪ್ ಮಾಸ್ಟರ್ ಅವರ ಸುಪುತ್ರರಾಗಿದ್ದ ತೋನ್ಸೆ ಜಯಂತ್ ಕುಮಾರ್ ರವರು ಯಕ್ಷಗಾನ ಸವ್ಯಸಾಚಿ ಯಕ್ಷವಾರಿಧಿ ಕಾಳಿಂಗ ನಾವುಡ ಯಕ್ಷಸುಮ ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ ಸಾವಿರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದ ಇವರು ಕೆಲವು ಸಂಘ ಸಂಸ್ಥೆಗಳನ್ನು ಕಟ್ಟಿ ರಾಜ್ಯ ಮಟ್ಟಕ್ಕೆ ಬೆಳೆಸಿದ್ದಾರೆ ಯಕ್ಷಗಾನ ಕೂಡ ಪಾತ್ರ ಮಾಡಿದ್ದಾರೆ ಜಯಂತ್ ಕುಮಾರ್ ಅವರು ಪತ್ನಿ ವಿನೋದ ಹಾಗೂ ಮೂರು ಮಂದಿ ಗಂಡು ಮಕ್ಕಳನ್ನು ಅಗಲಿದ್ದಾರೆ

