ಬೈಂದೂರು ತಾಲೋಕಿನ ಗೋಳಿಹೊಳೆ ಗ್ರಾಮದ ಕೋಡಿಯಾಲ್ ಕೇರಿ ಮೇಲ್ಮನೆ ಎಂಬಲ್ಲಿ ವಾಸವಾಗಿದ್ದ ಚಂದ್ರ (38ವರ್ಷ) ಎಂಬವರು ತಮ್ಮ ತೆಂಗಿನ ತೋಟದಲ್ಲಿ ತೆಂಗಿನ ಮರ ಹತ್ತಿದ್ದು ತೆಂಗಿನಕಾಯಿ ಕೀಳುವ ಭರದಲ್ಲಿ ಅಕಸ್ಮಿಕವಾಗಿ ಆಯತಪ್ಪಿ ಜಾರಿ ಕೆಳಕ್ಕೆ ಬಿದ್ದಿದ್ದು ಕೊಡಲೇ ಮನೆಯವರು ಅವರನ್ನು ಉಪಚರಿಸಿ ಹೆಚ್ಚಿನ ಚಿಕಿತ್ಸೆಗೆಂದು ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುದಾಗಿ ತಿಳಿಸಿದ್ದಾರೆ ಈ ಬಗ್ಗೆ ಬೈಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ