Home » ಕೋತಿರಾಜ್ ನಿಂದ ಶೋಧಕಾರ್ಯ
 

ಕೋತಿರಾಜ್ ನಿಂದ ಶೋಧಕಾರ್ಯ

by Kundapur Xpress
Spread the love

ಕುಂದಾಪುರ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಭಾನುವಾರ ನೀರುಪಾಲಾದ ಶರತ್‌ಗಾಗಿ ಮೂರನೇ ದಿನವಾದ ಮಂಗಳವಾರವೂ ಶೋಧ ಕಾರ್ಯ ಮುಂದುವರಿದಿದೆ.

ಸೋಮವಾರ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕದಳ ಸತತ ಆರು ಗಂಟೆ ಹುಡುಕಾಟ ನಡೆಸಿ, ನೀರಿನ ರಭಸ ಹೆಚ್ಚಾದ ಕಾರಣ ಕಾರ್ಯಚರಣೆ ನಿಲ್ಲಿಸಿದ್ದರು. ಮಂಗಳವಾರ ಕೋತಿರಾಜ್‌ ಹಾಗೂ ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಸಿದ್ದಾರೆ. ಭದ್ರಾವತಿಯಿಂದ ಕೊಲ್ಲೂರಿಗೆ ಬಂದ ಶರತ್ ಇಲ್ಲಿನ ಅರಶಿನಗುಂಡಿ ಜಲಪಾತದಲ್ಲಿ ಬಂಡೆ ಕಲ್ಲಿನ ಮೇಲೆ ನಿಂತ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಶರತಗ  ನೀ ರಿಗೆ ಬಿದ್ದಿದ್ದರು. ಶರತ್ ಕಾಲು ಜಾರಿ ಬೀಳುವ ವಿಡಿಯೋ ಸ್ನೇಹಿತನ ಮೊಬೈಲ್‌‌ನಲ್ಲಿ ಸೆರೆಯಾಗಿತ್ತು. ಸೋಮವಾರ ಮುಳುಗು ತಜ್ಞ ಈಶ್ವರ್ ಮಲ್ಪೆ, ಪೊಲೀಸರು 6 ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಶರತ್ ಮಾತ್ರ ಪತ್ತೆ ಆಗಿರಲಿಲ್ಲ. ಜಲಪಾತದ ನೀರಿನ ರಭಸದಿಂದ ಸೋಮವಾರ ಕಾರ್ಯಚರಣೆಗೂ ತೊಡಕಾಯಿತು. ಕಾರ್ಯಚರಣೆ ವೇಳೆ ಈಶ್ವರ್ ಮಲ್ಪೆ ಜಾರಿ ಬಿದ್ದಿದ್ದು ಅಪಾಯದಿಂದ ಪಾರಾಗಿದ್ದರು. ಮಂಗಳವಾರ ಚಿತ್ರದುರ್ಗದ ಕೋತಿರಾಜ್ ಬಂದು ಶೋಧನಾ ಕಾರ್ಯ ನಡೆಸಿದ್ದಾರೆ. ಸಂಜೆ ನಾಲ್ಕು ಗಂಟೆವರೆಗೂ ಶೋಧ ಕಾರ್ಯ ನಡೆಸಿದ ಕೋತಿರಾಜ್ ಪೊಲೀಸರು, ಅಗ್ನಿಶಾಮಕ ದಳ, NDRF ತಂಡದ ಸಹಾಯ ಪಡೆದರು. ಬುಧವಾರ ಮತ್ತೆ ಶೋಧ ಕಾರ್ಯ ಮುಂದುವರೆಯಲಿದ್ದು, ಈಶ್ವರ ಮಲ್ಪೆ ಮತ್ತವರ ತಂಡ ಶೋಧ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

   

Related Articles

error: Content is protected !!