ಕುಂದಾಪುರ : ಕುಂದಾಪುರ ನಗರದ ಯಡ್ತಾರೆ ನರ್ಸಿಂಗ್ ಹೋಂನ ಮಾಲೀಕ ಹಾಗೂ ಹಿರಿಯ ಸ್ತ್ರೀ ರೋಗ ತಜ್ಞರಾದ ರೋಟರಿಯನ್ ಡಾ. ಶುಭೋದ್ ಕುಮಾರ್ ಮಲ್ಲಿಯವರು ನಿನ್ನೆ ನಿಧನ ಹೊಂದಿದರು ವಿಶಿಷ್ಟ ವಿಶೇಷ ವ್ಯಕ್ತಿತ್ವದ ಮಲ್ಲಿಯವರು ಪಕ್ಷಿ ಸಂಕುಲ, ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ತ್ಯದ ಕುರಿತು ಅಪಾರ ಕಾಳಜಿ ಕಳಕಳಿ ಹೊಂದಿದ್ದು ಸಾಕಷ್ಟು ಅಧ್ಯಯನ, ಪುಸ್ತಕ ಬರೆದಿದ್ದರು ತನ್ನ ಕೆಲಸ ದೊಂದಿಗೆ ಇತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು