Home » ಕೋಟ ಶ್ರೀನಿವಾಸ ಪೂಜಾರಿ ತಾಯಿ ನಿಧನ
 

ಕೋಟ ಶ್ರೀನಿವಾಸ ಪೂಜಾರಿ ತಾಯಿ ನಿಧನ

ಲಚ್ಚಿ ಪೂಜಾರಿ

by Kundapur Xpress
Spread the love

ಕೋಟ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರಿ (97ವರ್ಷ) ವಯೋಸಹಜ ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

ಕೃಷಿ ಹೈನುಗಾರಿಕೆ ಕ್ಷೇತ್ರದಲ್ಲೂ ಗುರುತಿಸಿಕೊಂಡ ಲಚ್ಚಿ ಪೂಜಾರ್ತಿ ತನ್ನ ಪುತ್ರ ರಾಜಕಾರಣದ ಮಜಲುಗಳಿಗೆ ಸ್ಫೂರ್ತಿದಾಯಕರಾಗಿದ್ದರು. ಪೂಜಾರಿಯವರು ತನ್ನ ಯಶಸ್ಸಿನಲ್ಲಿ ತಾಯಿಯ ಪಾತ್ರ ಮಹತ್ವದಿದ್ದೆ ಎನ್ನತ್ತಿದ್ದಲ್ಲದೆ, ಇತ್ತೀಚೆಗಿನ ಅನಾರೋಗ್ಯಕ್ಕೀಡಾಗಿದ ಸಂದರ್ಭದಲ್ಲಿ ದಿನಂಪ್ರತಿಯಂತೆ ಮನೆಗೆ ಬಂದು ತಾಯಿಯ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದರು. .

ಗಣ್ಯರ ಸಂತಾಪ

ಮೃತರ ಅಗಲುವಿಕೆಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಉದ್ಯಮಿ ಆನಂದ ಸಿ. ಕುಂದ‌ರ್ ಸಹಿತ ರಾಜ್ಯ, ರಾಷ್ಟ್ರ ಮಟ್ಟದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

 

Related Articles

error: Content is protected !!