868
ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೊಟೇಲಿನ ಎದುರುಗಡೆ ಇರುವ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ಸಂತೋಷ್ ಆಚಾರ್ಯ ಎಂಬವರು ನಿನ್ನೆ ನಿಧನ ಹೊಂದಿದ ವಿಷಯ ತಿಳಿದ ಅವರ ಅನೇಕ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ
ನುರಿತ ಚಿನ್ನದ ಕೆಲಸಗಾರರಾಗಿದ್ದ ಅವರು ಕಳೆದ 25 ವರ್ಷಗಳಿಂದ ವಿವಿಧ ರೀತಿಯ ಚಿನ್ನದ ಆಭರಣಗಳನ್ನು ಗ್ರಾಹಕರಿಗೆ ತಯಾರಿಸಿ ಕೊಡುವ ಮೂಲಕ ಜನಮನ್ನಣೆ ಗಳಿಸಿದ್ದರು ಹೀಗಾಗಿ ಅನೇಕ ಗ್ರಾಹಕರು ಚಿನ್ನದ ಆಭರಣವನ್ನು ತಯಾರಿಸಲು ಮುಂಗಡ ಹಣ ಹಾಗೂ ಹಳೇ ಚಿನ್ನವನ್ನು ಸಂತೋಷ ಆಚಾರ್ಯರವರಿಗೆ ನೀಡಿದ್ದು ಇದೀಗ ಅವರ ಹಠಾತ್ ನಿಧನದಿಂದ ಅನೇಕ ಗ್ರಾಹಕರು ಆತಂಕಕ್ಕಿಡಾಗಿದ್ದಾರೆ ಎಂದು ತಿಳಿದು ಬಂದಿದೆ

