Home » ದೇವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಳಾಂತರ
 

ದೇವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸ್ಥಳಾಂತರ

by Kundapur Xpress
Spread the love

ಕೋಟೇಶ್ವರ : ಕೋಟೇಶ್ವರದ ದೇವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಕೋಟೇಶ್ವರದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಹತ್ತಿರದ ಡಾ.ಐತಾಳ್‌ ಕಾಂಪ್ಲೇಕ್ಸ್‌ ಗೆ ಸ್ಥಳಾಂತರಗೊಂಡಿತು ಕುಂದಾಪುರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಸ್ಥಳಾಂತರಿತ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಭಾಷಾ ಸಂವಹನದ ಕೊರತೆಯಿಂದ ಜನರು ಸೊಸೈಟಿಗಳತ್ತ ಆಕರ್ಷಿತರಾಗುತ್ತಿದ್ದು ಮಾತೃಭಾಷೆಯಲ್ಲಿ ಉತ್ತಮವಾದ ವ್ಯವಹಾರ ಮಾಡಿಕೊಂಡು ಸೊಸೈಟಿಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು

 ದೇವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಕೋಟೇಶ್ವರ ಇದರ ಅಧ್ಯಕ್ಷರಾದ ಶ್ರೀನಿವಾಸ್ ದೇವಾಡಿಗರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಸಹಕಾರಿ ಸಂಘಗಳ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ವಿ ಇವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು

 

ಸಮಾರಂಭದಲ್ಲಿ ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಇದರ ಅಧ್ಯಕ್ಷರಾದ ಅಣ್ಣಯ್ಯ ಸೇರಿಗಾರ್ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಇದರ ಅಧ್ಯಕ್ಷರಾದ ಶಿವರಾಮ್ ಶೆಟ್ಟಿ ಮಲ್ಯಾಡಿ ಮುಂಬೈ ಎಲ್‌ ಜಿ ಫೌಂಡೇಶನ್‌ ಇದರ ಅಧ್ಯಕ್ಷರಾದ ನಾಗರಾಜ್ ಡಿ ಪಡುಕೋಣೆ ಕೋಟೇಶ್ವರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ದೇವಾಡಿಗ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಗಿಣಿ ದೇವಾಡಿಗ ಹಾಗೂ ಕಟ್ಟಡದ ಮಾಲೀಕರಾದ ಡಾ.ರಾಜಶೇಖರ್‌ ಐತಾಳ್‌ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿಯವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು

 

Related Articles

error: Content is protected !!