Home » ತಾಯಿಯ ಮಡಿಲು ಸೇರಿದ ದಿಗಂತ್
 

ತಾಯಿಯ ಮಡಿಲು ಸೇರಿದ ದಿಗಂತ್

by Kundapur Xpress
Spread the love

ಬಂಟ್ವಾಳ : ಪೋಷಕರಿಂದ ದೂರ ಇರಬೇಕೆಂಬ ಉದ್ದೇಶದಿಂದ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿಪದ್ಮನಾಭ ಅವರ ಪುತ್ರ ದಿಗಂತ್ ನಾಪತ್ತೆಯಾಗಿ 12 ದಿನದ ಬಳಿಕ ಉಡುಪಿಯ ಡಿಮಾರ್ಟ್‌ನಲ್ಲಿ ಪತ್ತೆಯಾಗಿ ಮನೆಗೆ ಹೋಗಲ್ಲ ಅಂತಿದ್ದಾತ ಬುಧವಾರ ರಾತ್ರಿ ಮನಸ್ಸು ಬದಲಿಸಿ ತಾಯಿಯ ಜೊತೆ ಮನೆ ಸೇರಿದ್ದು, ಸದ್ಯ ಮನೆಯಲ್ಲೇ ವಾಸವಿದ್ದಾನೆ ಎಂದು ತಿಳಿದುಬಂದಿದೆ.

ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ದಿಗಂತ್ ಮನೆಗೆ ಹೋಗುವ ವಿಚಾರ ಹೇಳಿದರೆ ಆತನನ್ನು ಮನೆಗೆ ಕಳುಹಿಸಿಕೊಡಿ ಎಂದು ನ್ಯಾಯಾಲಯ ಸೂಚಿಸಿತ್ತು.

ಆರಂಭದಲ್ಲಿ ಆತ ಮನೆಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದು, ಸಂಜೆ ಸಿಡಬ್ಲ್ಯ ಸಿಯಲ್ಲಿ ನಡೆದ ಮಾತುಕತೆಯ ವೇಳೆ ಆತನ ಮನವೊಲಿಸುವಲ್ಲಿ ಸಿಡಬ್ಲ್ಯು ಸಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಬಳಿಕ ದಿಗಂತ್ ನನ್ನು ತಾಯಿಯ ಮಡಿಲಿಗೆ ಒಪ್ಪಿಸಲಾಯಿತು. ಅಲ್ಲಿಂದ ನೇರ ತಾಯಿ ಜೊತೆಯಲ್ಲಿ ದಿಗಂತ್ ಮನೆ ಸೇರಿಕೊಂಡಿದ್ದಾನೆ 

 

Related Articles

error: Content is protected !!