ಕುಂದಾಪುರ : ಚಿಕ್ಕ ಮಕ್ಕಳಲ್ಲಿ ವಾಕ್ ಶ್ರವಣವನ್ನು ಪತ್ತೆ ಹಚ್ಚುವುದೇ ಕಷ್ಟದ ಕೆಲಸ. ಆರು ವರ್ಷದ ಒಳಗೆ ಅದನ್ನು ಪತ್ತೆ ಹಚ್ಚಿ ಅದರ ಬಗ್ಗೆ ಚಿಕಿತ್ಸೆ ನೀಡಿದರೆ ಅವರು ಶೀಘ್ರವೇ ಗುಣಮುಖರಾಗಲು ಸಾಧ್ಯ. ಇದಕ್ಕೆ ನಿಪುಣತೆ ಇರುವ ತಂತ್ರಜ್ಞರ ಕೊರತೆ ಇತ್ತು ಆ ಕೊರೆತೆ ನೀಗಿಸಲು ಇಲಾಖೆ ಹಾಗೂ ಇಲ್ಲಿನ ವೈದ್ಯರು ಆಸಕ್ತಿ ವಹಿಸಿ ದಾನಿಗಳ ಸಹಕಾರದಿಂದ ವಾಕ್ ಶ್ರವಣ ಔಟ್ರೀಚ್ ಸರ್ವಿಸ್ ಘಟಕ ನಿರ್ಮಾಣ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗೂಂಡುರಾವ್ ರವರು ನುಡಿದರು
ನಿವೃತ್ತ ಶುಶ್ರೂಷಕ ಅಧೀಕ್ಷಕಿ ದಿ.ವಿಜಯಬಾಯಿ ಅವರ ಸ್ಮರಣಾರ್ಥ ಪತಿ ಶಿವರಾಮ್ ಪುತ್ರನ್ ಮತ್ತು ಮಕ್ಕಳು ಕೊಡಮಾಡಿದ ದೇಣಿಗೆಯಲ್ಲಿ ವಾಕ್ ಶ್ರವಣ ಕೇಂದ್ರವು ಬಹಳ ಚೆನ್ನಾಗಿ ನಿರ್ಮಾಣಗೊಂಡಿದೆ. ಶಿವರಾಮ್ ಪುತ್ರನ್ ಅವರು ಹೃದಯ ಶ್ರೀಮಂತಿಕೆಯ ಪ್ರತೀಕವಾಗಿ ಅನೇಕರಿಗೆ ಪ್ರೇರಣೆಯಾಗಿದ್ದಾರೆ ಅನೇಕರಲ್ಲಿ ಹಣ ಇರುತ್ತದೆ. ಆದರೆ ಅದನ್ನು ದಾನ ಮಾಡುವ ಮನಸ್ಸು ಇರುವುದಿಲ್ಲ. ಸಮಾಜಕ್ಕೆ ಒಳ್ಳೆಯದನ್ನು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅವರು ಪುಣ್ಯದ ಕೆಲಸ ಮಾಡಿದ್ದಾರೆ ಎಂದ ಸಚಿವರು ಅವರ ಪುಣ್ಯದ ಫಲ ಅವರಿಗೂ ಮತ್ತು ಸಮಾಜದ ಜನರಿಗೂ ಸಿಗಲಿ ಎಂದು ಶಿವರಾಮ್ ಪುತ್ರನ್ ರವರಿಗೆ ಶುಭ ಹಾರೈಸಿದರು