Home » ಅವೈಜ್ಞಾನಿಕ ಟೋಲ್ ಸಂಗ್ರಹ ಪ್ರಸ್ತಾಪ ಖಂಡನೀಯ
 

ಅವೈಜ್ಞಾನಿಕ ಟೋಲ್ ಸಂಗ್ರಹ ಪ್ರಸ್ತಾಪ ಖಂಡನೀಯ

ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ

by Kundapur Xpress
Spread the love

ಉಡುಪಿ : ಪ್ರಸಕ್ತ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರವಿದೆ. ರಾಜ್ಯ ಹೆದ್ದಾರಿ ಎಂಬ ಸಬೂಬು ನೀಡಿ ಕೇವಲ 3 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ಟೋಲ್ ಸಂಗ್ರಹ ಕೇಂದ್ರ ತೆರೆಯಲು ರಾಜ್ಯ ಸರಕಾರ ತಯಾರಿ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಜಿ.ಪಂ. ಸದಸ್ಯೆ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ತಿಳಿಸಿದ್ದಾರೆ.

ಈಗಾಗಲೇ ಎಲ್ಲ ಮುಲಭೂತ ಆದ್ಯತೆಗಳ ಹಾಗೂ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಈ ಬಾರಿ ಮಳೆಯ ರುದ್ರ ನರ್ತನದಿಂದ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಈ ಸಂದಿಗ್ದ ಸನ್ನಿವೇಶದಲ್ಲಿ ಎರಡೆರಡು ಕಡೆ ಟೋಲ್ ತೆತ್ತು ಸಂಚರಿಸುವುದು ಜನರಿಗೆ ಅತೀವ ಹೊರೆಯಾಗಲಿದೆ.

ಕಾರ್ಕಳ ರಸ್ತೆಯಲ್ಲಿ ಟೋಲ್ ಗೇಟನ್ನು ವೈಜ್ಞಾನಿಕವಾಗಿ ಅಳವಡಿಸುವುದು ಸಾಧ್ಯವಾಗದ ಮಾತು. ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ಸದ್ರಿ ಟೋಲ್ ಸಂಗ್ರಹ ಪ್ರಸ್ತಾಪವನ್ನು ಕೈಬಿಡದೇ ಇದ್ದಲ್ಲಿ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವೆನಿಸಲಿದೆ ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!