ಕುಂದಾಪುರ :ಕುಂದಾಪುರ ಪುರಸಭೆ ಹಾಗೂ ಪಶು ಸಂಗೋಪನ ಇಲಾಖೆ ಕುಂದಾಪುರ ಇವರ ಸಹಯೋಗದಲ್ಲಿ ಆಗಸ್ಟ್ 15 ರಿಂದ ಸಪ್ಟಂಬರ್ 13 ರವರೆಗೆ 403 ಬೀದಿ ನಾಯಿಗಳನ್ನು ಬಂಧಿಸಿ ಎರಡು ದಿನಗಳ ಬಳಿಕ ಅವುಗಳನ್ನು ಬಿಡುಗಡೆಗೊಳಿಸಲಾಯಿತು
ಕುಂದಾಪುರ ಪುರಸಭೆಯ ಪರಿಸರ ಅಭ್ಯಂತರವಾದ ಗುರುಪ್ರಸಾದ್ ಶೆಟ್ಟಿ ಹಾಗೂ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ನಾಯಕ್ ಮತ್ತು ಪಶು ಸಂಗೋಪನ ಇಲಾಖೆಯ ಉಪಪಶು ವೈದ್ಯಾಧಿಕಾರಿಗಳಾದ ಬಾಬಣ್ಣ ಪೂಜಾರಿ ಹಾಗೂ ಆಸ್ರಾ ಸಂಸ್ಥೆಯವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಪುರಸಭೆಯ ಈ ಕಾರ್ಯಕ್ಕೆ ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ