ಬಸಿರ್ಹಾತ್ : ಪಶ್ಚಿಮ ಬಂಗಾಳದ ಸಂದೇಶ್ಖಾಲಿ ದ್ವೀಪ ಪ್ರದೇಶದ ಕುಖ್ಯಾತ ಡಾನ್, ಟಿಎಂಸಿ ಮುಖಂಡ ಶಾಜಹಾನ್ನನ್ನು ಗುರುವಾರ ಬೆಳಗಿನ ಜಾವ ಬಂಧಿಸಲಾಗಿದೆ. ಕಳೆದ 55 ದಿನಗಳಿಂದ ನಾಪತ್ತೆಯಾಗಿದ್ದ ಕುಖ್ಯಾತ ಭೂವಂಚಕ, ಮಹಿಳಾ ಪೀಡಕನ ಬಂಧನದೊಂದಿಗೆ ಈತನ ಬಂಧನಕ್ಕಾಗಿ ಕಳೆದ 2 ತಿಂಗಳಿಂದ ಬೃಹತ್ ಹೋರಾಟ ನಡೆಸಿದ್ದ ದಮನಿತ ಸಮುದಾಯ ಮತ್ತು ಹಿಂದೂ ಮಹಿಳೆಯರಿಗೆ ದೊಡ್ಡ ಜಯ ಸಿಕ್ಕಂತಾಗಿದೆ. ಅವರೆಲ್ಲರೂ ಸಂಭ್ರಮಾಚರಣೆ ಮಾಡಿದ್ದಾರೆ.
ಸಂದೇಶ್ಖಾಲಿಯಿಂದ ಕೇವಲ 30 ಕಿ.ಮೀ ದೂರದ ಬಮನ್ಪುಕರ್ ಪ್ರದೇಶದ ಮನೆಯೊಂದರಲ್ಲಿ ಶಾಜಹಾನ್, ತನ್ನ ಸಂಗಡಿಗರೊಂದಿಗೆ ಸಿಕ್ಕಿಬಿದ್ದಿದ್ದಾನೆ.ಬಂಧನದ ಬೆನ್ನಲ್ಲೇ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ ಶಾಜಹಾನ್ ಶೇಖ್ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿದೆ. ಈ ನಡುವೆ ಈತನ ಪ್ರಕರಣದಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಈತನನ್ನು ಸರ್ಕಾರದಲ್ಲಿ ಅನುಭವಿಸುತ್ತಿದ್ದ ನಿಗಮ-ಮಂಡಳಿಗಳ ಹುದ್ದೆಯಿಂದ ವಜಾ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.