ಉಡುಪಿ :ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರ ಚತುರ್ಥ ಪರ್ಯಾಯವು ವೈಭೋವೋಪೇತವಾಗಿ ನಡೆಸುವಂತೆ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಕೆ. ಸತ್ಯನಾರಾಯಣ ರಾಜು ರವರು ಪುತ್ತಿಗೆ ಪರ್ಯಾಯದ ಆರ್ಥಿಕ ಮನವಿಗೆ ಸ್ಪಂದಿಸಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್. ಎಸ್. ಬಲ್ಲಾಳರಿಗೆ ರೂ. 25,00,000 ದೇಣಿಗೆಯನ್ನು ಹಸ್ತಾಂತರಿಸಿ ದಲ್ಲದೆ ಪುತ್ತಿಗೆ ಪರ್ಯಾಯಕ್ಕೆ ಮುಂದೆಯೂ ತಮ್ಮ ಸಂಸ್ಥೆಯಿಂದ ಸರ್ವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ್ ಆಚಾರ್ಯ, ಕೋಶಾಧಿಕಾರಿ ಶ್ರಿ ರಂಜನ್ ಕಲ್ಕೂರ, ಸಂಚಾಲಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಶ್ರಿ ರಮೇಶ್ ಭಟ್ ಕೆ, ಸಮಿತಿ ಸದಸ್ಯರುಗಳಾದ ಶ್ರೀ ರವೀಂದ್ರ ಆಚಾರ್ಯ, ಶ್ರೀ ಉಮೇಶ್ ಭಟ್, ಹಾಗು ಬ್ಯಾಂಕಿನ ಅಧಿಕಾರಿಗಳಾದ ಶ್ರೀ.ಎಂ. ಜಿ .ಪಂಡಿತ್ .ಶ್ರೀ ವಿನೋದ್ ವಿಷ್ಣು ಜೋಶಿ, ಶ್ರೀ ರಾಜೀವ್ ತುಕ್ರಾಲ್, ಶ್ರೀ ರವಿ ಪ್ರಸಾದ್ ಭಟ್ ಉಪಸ್ಥಿತರಿದ್ದರು