Home » ವಿವಿಧ ಗೋ ಶಾಲೆಗಳಿಗೆ ನೆರವು
 

ವಿವಿಧ ಗೋ ಶಾಲೆಗಳಿಗೆ ನೆರವು

ಶ್ರೀ ಮಹಾವಿಷ್ಣು ವೈದಿಕ ಮಂದಿರ

by Kundapur Xpress
Spread the love

ಕೋಟ : ಶ್ರೀ ಮಹಾವಿಷ್ಣು ವೈದಿಕ ಮಂದಿರ ಇಲ್ಲಿಯ ಗೋಗ್ರಾಸ ನಿಧಿಯಿಂದ ತಾಲೂಕಿನ ವಿವಿಧ ಗೋ ಶಾಲೆಗಳಾದ ನಂಚಾರು ಗೋಶಾಲೆಗೆ, ಹಾಗೂ ನೀಲಾವರ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಬಾಳೆಕುದ್ರು ಮಠದ ಗೋಶಾಲೆಗೆ ಸುಮಾರು 50,೦೦೦ ಮೌಲ್ಯದ ಒಣ ಹುಲ್ಲನ್ನು ಸೇವೆಯ ರೂಪದಲ್ಲಿ ಹಸ್ತಾಂತರಿಸಲಾಯಿತು.ಇದೇ ವೇಳೆ ಭಟ್ಟ ಮಾಣಿ ಶಂಕರನಾರಾಯಣ ದೇವಸ್ಥಾನದ ಆಡಳಿತದಲ್ಲಿ ನಡೆಯುವ ಶ್ರೀ ಮಹಾವಿಷ್ಣು ವೈದಿಕ ಮಂದಿರ ಹಲವಾರು ಆಶಕ್ತರಿಗೂ ಧನಸಹಾಯ ನೀಡಿ ಪ್ರೋತ್ಸಾಹಿಸಿತು.
ಗುಂಡ್ಮಿ ಶ್ರೀ ಮಹಾವಿಷ್ಣು ವೈದಿಕ ಮಂದಿರದ ಆಡಳಿತ ಮಂಡಳಿಯ ಚಂದ್ರಶೇಖರ ಉಪಾಧ್ಯಾಯ, ಜಿ.ಶಿವಾನಂದಮಯ್ಯ, ಜಿ.ರಾಮಚಂದ್ರ ಐತಾಳ್, ಉದಯ ಮಯ್ಯ, ಕಾಶಿ ಮೈಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ಜರಗಿದವು.

 

Related Articles

error: Content is protected !!