ಕುಂದಾಪುರ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಡ್ರಗ್ಸ್ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10ನೇ ಕ್ರಾಸ್, ಸುಭಾಸ್ ನಗರ ನಿವಾಸಿ ಮೊಹಮ್ಮದ್ ಎಂಬುವರ ಮಗ ಮುದಾಸ್ಸಿರ್ (23 ವರ್ಷ) ಹಾಗೂ ಉಡುಪಿ ಜಿಲ್ಲೆಯ ಉದ್ಯಾವರ, ಬೋಳಾರಗುಡ್ಡೆಯ ಲೋಬೊ ವಿಲ್ಲಾ ನಿವಾಸಿ ಅನಿಲ್ ಲೋಬೋ ಎಂಬುವರ ಮಗ ಅಡೆನ್ ಲೋಬೋ (18 ವರ್ಷ) ಎಂದು ಗುರುತಿಸಲಾಗಿದೆ.
ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿದಾಗ ಆರೋಪಿಗಳು ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ಬಳಿಕ ವಿಚಾರಿಸಿದಾಗ ಎಂಡಿಎಂಎ ಎಂಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ
ಬಂಧಿತ ಆರೋಪಿಗಳಿಂದ ಅಂದಾಜು 2.49.449 ರೂಪಾಯಿ ಮೌಲ್ಯದ 124.72 ಗ್ರಾಂ ಎಂಡಿಎಂಎ, ಪಿ. ಒರಾಕಲ್ ಎಂಬ ಹೆಸರಿನ ಪ್ಲಾಸ್ಟೀಕ್ ಬಾಕ್ಸ್ 9 ಇನ್ಸುಲಿನ್ ಸಿರಿಂಜ್, ENER-MECH ಎಂಬ ಕಪ್ಪು ಬ್ಯಾಗ್, Fresh ಎಂಬ ಪ್ಲಾಸ್ಟಿಕ್ ಬಾಕ್ಸ್, 2 ವೇಯಿಂಗ್ ಮೇಶಿನ್, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಒಂದು ಪ್ಲಾಸ್ಟಿಕ್ ಬಾಕ್ಸ್, 36 ಪ್ಲಾಸ್ಟಿಕ್ ಜಿಪ್ ಲಾಕ್ ಕವರ್,ಒಂದು Allen Solly Exclusive ಮೆಟಲ್ ಬಾಕ್ಸ್ 4540/ ರೂ ನಗದು, 1 ಡ್ರಾಗನ್ ಚೂರಿ, 1 OPPO ಮೊಬೈಲ್, 2 ಸ್ಯಾಮ್ಸ್ಂಗ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ

