635
ಕುಂದಾಪುರ : ಬೈಂದೂರು ತಾಲೋಕಿನ ಖಂಬದಕೋಣೆಯ ನಾಗರಮಕ್ಕಿ ನಿವಾಸಿಯಾದ ಮಹೇಶ್ ಮಡಿವಾಳ ಎಂಬವರು ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಧಾಖಲಾದ ಘಟನೆ ಇಂದು ಸಂಜೆ 4.00 ಗಂಟೆಯ ವೇಳೆಗೆ ನಡೆದಿದೆ
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಯಾವುದೋ ಅಪರಿಚಿತ ವಾಹನವು ಮಹೇಶ್ ಮಡಿವಾಳ ಎಂಬವರ ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತೆಗೆ ದಾಖಲಿಸಲಾಗಿದೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ

