ಉಡುಪಿ : 2024 ರ ಜೂನ್ ತಿಂಗಳಿನಲ್ಲಿ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.ಪದವಿ ಪೂರೈಸಿರುವ ಮತದಾರರು ಚುನಾವಣಾ ಆಯೋಗದ ನಮೂನೆ 18 ಅನ್ನು ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.
ನಮೂನೆ 18ನ್ನು ಭರ್ತಿ ಮಾಡಲು ಮಾನ್ಯತೆ ಹೊಂದಿರುವ ಭಾರತದ ಯಾವುದೇ ವಿಶ್ವವಿದ್ಯಾನಿಲಯದಿಂದ ನವೆಂಬರ್ 1, 2020ರ ಮುಂಚಿತವಾಗಿ ಪದವಿ ಪಡೆದಿರಬೇಕು.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ.
ನಮೂನೆ 18 ರೊಂದಿಗೆ ಲಗತ್ತಿಸಬೇಕಿರುವ ದಾಖಲೆಗಳು
1 – ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್
2 – ಪದವಿ ಪ್ರಮಾಣ ಪತ್ರದ ನಕಲು ಪ್ರತಿ (ಸ್ವಯಂ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ಅಥವಾ ನೋಟರಿಯಿಂದ ದೃಢೀಕರಿಸುವುದು)
3 – 2 ಪಾಸ್‌ಪೋರ್ಟ್ ಅಳತೆಯ (White Background ಬಿಳಿ ಹಿನ್ನೆಲೆಯ) ಭಾವಚಿತ್ರ