264
ಬೆಂಗಳೂರು: ಭಾರತದ 18ನೇ ಲೋಕಸಭೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಶುಕ್ರವಾರ ನಡೆದ ಮತದಾನ ಹಬ್ಬ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 247 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದೆ. ಬೆಳಗ್ಗೆ 7.00ರಿಂದ ಸಂಜೆ 6.00 ಗಂಟೆವರೆಗೆ ನಡೆದ ಮತದಾನ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ಶೇ.69.23 ಮತದಾನವಾಗಿದೆ.
ಎಲ್ಲ ಮತಗಟ್ಟೆಗಳಿಂದ ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರಗಳಿಗೆ ಒಯ್ದು ಅಲ್ಲಿಂದ ಮತ ಎಣಿಕೆ ಕೇಂದ್ರಗಳಲ್ಲಿ ಸಿದ್ಧಪಡಿಸಲಾಗಿರುವ ಸ್ಟ್ರಾಂಗ್ ರೂಮ್‌ಗಳಲ್ಲಿ ಭದ್ರವಾಗಿಡಲಾಗಿದೆ. ರಾಜ್ಯದ ಮತದಾರ ಪ್ರಭುಗಳು ತಮ್ಮ ಪ್ರತಿನಿಧಿಯಾಗಿ ಯಾರು ಸಂಸತ್ ಭವನ ಪ್ರವೇಶಿಸಬೇಕೆಂದು ನಿರ್ಧರಿಸಿದ್ದಾರೆ. ಮತದಾರರು ಬರೆದಿರುವ ಅಭ್ಯರ್ಥಿಗಳ ಭವಿಷ್ಯ ಮತ ಎಣಿಕೆ ದಿನವಾದ ಜೂ.4ರಂದು ಬಹಿರಂಗವಾಗಲಿದೆ

