Home » ರಿವೋಲ್ಟ್ ಭಾರತದ ಪ್ರಥಮ ವಿದ್ಯುತ್ ಚಾಲಿತ ಬೈಕ್
 

ರಿವೋಲ್ಟ್ ಭಾರತದ ಪ್ರಥಮ ವಿದ್ಯುತ್ ಚಾಲಿತ ಬೈಕ್

by Kundapur Xpress
Spread the love

ಮಂಗಳೂರು : ಪೆಟ್ರೋಲ್ ಚಾಲಿತ ವಾಹನಗಳು ಇಡೀ ವಿಶ್ವವನ್ನೇ ಆಳುತ್ತಿರುವಾಗ ಇಲ್ಲೊಂದು ಭಾರತೀಯ ವಿದ್ಯುತ್ ಚಾಲಿತ ಬೈಕ್ ಸಂಸ್ಥೆ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ವಿಭಿನ್ನ ವಿನ್ಯಾಸಗಳಲ್ಲಿ ಲಭ್ಯವಿರುವ ಈ ವಿದ್ಯುತ್ ಚಾಲಿತ ಬೈಕ್ ಆಕರ್ಷಕ ರೀತಿಯ ವಿಶಿಷ್ಟ ವಿನ್ಯಾಸ ಹೊಂದಿದೆ. ರಿವೋಲ್ಟ್ ಸಂಸ್ಥೆ 2017ರಲ್ಲಿ ಮೈಕ್ರೋಮ್ಯಾಕ್ಸ್ ಸಂಸ್ಥೆಯ ಒಬ್ಬರು ಪಾಲುದಾರರಾದ ರೋಹನ್ ಶರ್ಮರಿಂದ ಸಂಸ್ಥಾಪಿಸಲ್ಪಟ್ಟಿತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರ್ ಗಳು ಜೊತೆಗೂಡಿ ಸ್ಥಾಪಿಸಲ್ಪಟ್ಟ ರಿವೋಲ್ಟ್ ಬೈಕ್ಅತ್ಯಾಧುನಿಕ ಎಐ ವಿನ್ಯಾಸದ ತಂತ್ರಜ್ಞಾನ ಅತ್ಯಾಧುನಿಕ ಬ್ಯಾಟರಿ ವಿದ್ಯುತ್ ಸಂಗ್ರಹಣ ಹೊಸ ವಿನ್ಯಾಸದ ತಂತ್ರಜ್ಞಾನವನ್ನು ಹೊಂದಿದೆ

ಏಐ ತಂತ್ರಜ್ಞಾನ ಹೊಂದಿರುವ ವಿದ್ಯುತ್ ಚಾಲಿತ ರಿವೋಲ್ಟ್ ಬೈಕ್ 4 ಮಾಡೆಲ್ ಗಳನ್ನು ಒಳಗೊಂಡಿದೆ. ಎಲ್ ಸಿ ಡಿ ಎಲ್ ಡಿ ಆರ್ ಡಿಸ್ಪ್ಲೇ ಮತ್ತು 270 ಡಿಗ್ರಿ ಹೆಡ್ ಲೈಟ್ ವಿನ್ಯಾಸವನ್ನು ಹೊಂದಿದೆ. ಬೈಕಿನ ಎರಡು ಚಕ್ರಗಳು 17 ಎಂಎಂ ಇದು ಇದ್ದು ಡಿಸ್ಕ್ ಬ್ರೇಕ್ ಇರುವ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಹೊಂದಿದೆ. ವಿದ್ಯುತ್ ಚಾಲಿತ ಬೈಕ್ ಮೂರು ಕಿಲೋ ವ್ಯಾಟ್ ಅತ್ಯಂತ ಬಲಶಾಲಿ ಮೋಟರನ್ನು ಹೊಂದಿದೆ. 215 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕೂಡ ಈ ಬೈಕ್ ಹೊಂದಿದೆ. ವಿದ್ಯುತ್ ಚಾಲಿತ ಬೈಕಿನ ಬ್ಯಾಟರಿ ಹೊರತೆಗೆದು ಅಥವಾ ಬೈಕಿಗೆ ಚಾರ್ಜರ್ ಅಳವಡಿಸಿ ಕೂಡ ಚಾರ್ಜ್ ಮಾಡುವ ವ್ಯವಸ್ಥೆ ಇದೆ

ಬ್ಯಾಟರಿ ಒಂದು ಸಲ ಸಂಪೂರ್ಣವಾಗಿ ತುಂಬಬೇಕಾದರೆ ಮೂರರಿಂದ ನಾಲ್ಕು ಗಂಟೆ ಚಾರ್ಜಿಂಗ್ ನ ಅಗತ್ಯವಿರುತ್ತದೆ. ಒಂದು ಸಲ ಸಂಪೂರ್ಣವಾಗಿ ಬ್ಯಾಟರಿ ಚಾರ್ಜ್ ಆದರೆ 150 ಕಿ.ಮೀ ದೂರವನ್ನು ಕ್ರಮಿಸಬಹುದಾಗಿದೆ. ರಿವೋಲ್ಟ್ ವಿದ್ಯುತ್ ಚಾಲಿತ ಬೈಕ್ ಮೂರು ಮೋಡ್ ಗಳನ್ನು ಹೊಂದಿದೆ. ಇಕೋ ಮೋಡ್ನಲ್ಲಿ 150 ಕಿ.ಮೀ ಸಿಟಿ ಮೋಡ್ನಲ್ಲಿ 100 ಕಿಲೋಮೀಟರ್ ಸ್ಪೋರ್ಟ್ಸ್ ಮೊಡ್ನಲ್ಲಿ 80 ಕಿಲೋಮೀಟರ್ ಕ್ರಮಿಸಬಹುದಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಹೊಚ್ಚ ಹೊಸ RV1 ಮಾಡೆಲ್ ಅನ್ನು ರಿವೋಲ್ಟ್ ಬಿಡುಗಡೆ ಮಾಡಿದ್ದು ಭಾರತದದ್ಯಂತ ಹೊಸ ಬೈಕ್ ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು 16,000 ಬೈಕುಗಳನ್ನು ಈಗಾಗಲೇ ಕಾದಿರಿಸಲಾಗಿದೆ . ಈ ರಿವೋಲ್ಟ್ ಬೈಕಿನ ಶೋರೂಮ್ ಮಂಗಳೂರಿನಲ್ಲಿದ್ದು
ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ನಂಬರ್ ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ
M:9743795025, 8904282323

ಪ್ರದೀಪ್‌ ಕುಮಾರ್‌ ಚಿನ್ಮಯಿ ಆಸ್ಪತ್ರೆ ,ಕುಂದಾಪುರ

   

Related Articles

error: Content is protected !!