ಕಾಪು : ಇಲ್ಲಿನ ಶಿರ್ವ ಸಮೀಪದ ನಡಿಬೆಟ್ಟು ಎಂಬಲ್ಲಿ ನಾಗರ ಪಂಚಮಿ ಹಬ್ಬದ ಹಿನ್ನೆಲೆ ತೆಂಗಿನ ಮರದಿಂದ ಎಳನೀರು ತೆಗೆಯಲು ಹೋದ ವ್ಯಕ್ತಿಗೆ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಶಿರ್ವದ ನಡಿಬೆಟ್ಟು ಸಮೀಪದ ಪನಿಯಾರ ಮನೆಯ ಕೆಲಸಗಾರ ಸುರೇಶ್ ಶೆಟ್ಟಿ (68ವರ್ಷ) ಮೃತಪಟ್ಟವರು. ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾಗರ ಪಂಚಮಿ ಹಬ್ಬದ ಅಭಿಷೇಕಕ್ಕೆ ತೋಟದಲ್ಲಿದ್ದ ಕಬ್ಬಿಣದ ಸಲಾಕೆಯನ್ನು ಬಳಸಿ ತೆಂಗಿನ ಮರದಿಂದ ಬೊಂಡವನ್ನು ತೆಗೆಯುತ್ತಿದ್ದ ಸಂದರ್ಭದಲ್ಲಿ ತೋಟದಲ್ಲಿ ಹಾದುಹೋಗಿದ್ದ ಹೈಟೆನ್ನನ್ ತಂತಿಗೆ ಸುರೇಶ್ ಕೈಯಲ್ಲಿದ್ದ ಸಲಾಕೆ ತಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಆಘಾತಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಿರ್ವ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ.