ಕುಂದಾಪುರ : ಕಿರಿಯ ಮಾರ್ಗದಾಳು ನೇಮಕಾತಿ ಪ್ರಕ್ರಿಯೆಯು ಪ್ರಾರಂಭಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಕುಂದಾಪುರ ವಿಭಾಗದ ವತಿಯಿಂದ ವಿದ್ಯುತ್ ಕಂಬ ಹತ್ತಿ ಇಳಿಯುವ ಉಚಿತ ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಗಾಂಧಿ ಮೈದಾನದಲ್ಲಿನ 11 ರಿಂದ 13ರವರೆಗೆ ಆಯೋಜಿಸಿದೆ.
ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಅಭ್ಯರ್ಥಿಗಳು ಭಾವಚಿತ್ರ ಇರುವ ಗುರುತಿನ ಚೀಟಿಯೊಂದಿಗೆ (ಆಧಾರ್ ಕಾರ್ಡ್) ಕುಂದಾಪುರದ ಗಾಂಧಿ ಮೈದಾನದಲ್ಲಿ ಹಾಜರಿರಬೇಕು. ತರಬೇತಿಯು ಬೆಳಿಗ್ಗೆ 9.30ರಿಂದ ಮಧ್ಯಾಹ್ನ12.30ರವರೆಗೆ ನಡೆಯಲಿದೆ. ನೇಮಕಾತಿಯು ಅಭ್ಯರ್ಥಿಯ ಅಂಕ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ತರಬೇತಿ ಅವಧಿಯಲ್ಲಿ ಯಾವುದೇ ಉಚಿತ ಸೌಲಭ್ಯಗಳಿರುವುದಿಲ್ಲ ಎಂದು ಮೆಸ್ಕಾಂ ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ತಿಳಿಸಿದ್ದಾರೆ.