Home » ಪುಟ್ಬಾಲ್ ಪಂದ್ಯಾಟ: ಎಕ್ಸಲೆಂಟ್‌ನ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
 

ಪುಟ್ಬಾಲ್ ಪಂದ್ಯಾಟ: ಎಕ್ಸಲೆಂಟ್‌ನ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

by Kundapur Xpress
Spread the love

ಕುಂದಾಪುರ:ಎಕ್ಸಲೆಂಟ್ ವಿದ್ಯಾಸಂಸ್ಥೆಯು ಕೇವಲ ಶಿಕ್ಷಣಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದದ್ದಲ್ಲದೆ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕ್ಷೇತ್ರದಲ್ಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ತನ್ನ ಹಿರಿಮೆಯ ಛಾಪನ್ನು ಮೂಡಿಸಿ ಅದೆಷ್ಟೊ ಪ್ರಶಸ್ತಿಗಳನ್ನು ತನ್ನ ಮೂಡಿಗೇರಿಸಿಕೊಂಡಿದೆ. ಅಂತಹ ಸಾಧನೆಗಳ ಹಾದಿಯ ದಾಖಲೆಗಳ ಸರಮಾಲೆಗಳ ಗರಿಯತ್ತ ಸಾಗುತ್ತಾ,  ಪದವಿ ಪೂರ್ವ ಶಿಕ್ಷಣ ಇಲಾಖೆ, ನಡೆಸಿದ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪುಟ್ಬಾಲ್ ಪ್ರತಿಭೆಗಳಾದ ಪ್ರಥಮ್ ಎಸ್ ಶೆಟ್ಟಿ ಮತ್ತು ಎಲಿಕ್ ಅಬ್ರಾನ್ ದಾಲ್‌ಮೇದಾ ರವರು ತಾಲೂಕು ತಂಡದ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ.

ಈ ನಮ್ಮ ಸಂಸ್ಥೆಯ ಹೆಮ್ಮೆಯ ಪುಟ್ಬಾಲ್ ಆಟಗಾರರಾದ ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುವುದರ ಜೊತೆಗೆ ಜಿಲ್ಲಾಮಟ್ಟದಲ್ಲಿಯೂ ಸಾಧನೆಯನ್ನು ಮಾಡಿ ಆಯ್ಕೆಗೊಳ್ಳುವಂತೆ ಹಾರೈಸಿದ್ದಾರೆ.

 

Related Articles

error: Content is protected !!