Home » ಯಂತ್ರಶ್ರೀ ಯೋಜನೆಯಡಿ ಕೃಷಿ ತರಬೇತಿ ಕಾರ್ಯಕ್ರಮ
 

ಯಂತ್ರಶ್ರೀ ಯೋಜನೆಯಡಿ ಕೃಷಿ ತರಬೇತಿ ಕಾರ್ಯಕ್ರಮ

by Kundapur Xpress
Spread the love

ಕೋಟ: ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಕಾವಡಿ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಕಾರ್ಯಕ್ರಮದ ಕುರಿತು ಕೃಷಿ ತರಬೇತಿ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ಈ ಕಾರ್ಯಕ್ರಮವನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಶ್ರೀನಿವಾಸ್ ಉಡುಪ ಯಂತ್ರಶ್ರೀ ಯೋಜನೆಯ ಬಗ್ಗೆ ಸಸಿ ಮಡಿ ತಯಾರಿ ಮತ್ತು ನಿರ್ವಹಣೆ, ಯಂತ್ರಶ್ರೀ ನಾಟಿಯ ವಿಧಾನದ ಬೀಜಗಳ ಸಂಸ್ಕರಣೆ & ಸಂಸ್ಕರಣೆ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಾಘವೇಂದ್ರ ಸಾಂಪ್ರದಾಯಿಕ ಬತ್ತ ನಾಟಿಗೂ ಹಾಗೂ ಯಂತ್ರಶ್ರೀ ಭತ್ತ ನಾಟಿಗೂ ಇರುವ ವ್ಯತ್ಯಾಸದ ಬಗ್ಗೆ ಯಂತ್ರಶ್ರೀ ನಾಟಿಯಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಸಿಮಡಿ ತಯಾರಿ ಕಡಿಮೆ ಕೂಲಿ ಆಳಿನಲ್ಲಿ ಯಂತ್ರಶ್ರೀ ಭತ್ತ ನಾಟಿ ಯಂತ್ರಶ್ರೀ ನಾಟಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಹಾಗೂ ಹೆಚ್ಚಿನ ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹೇಬರಕಟ್ಟೆ ವ್ಯವಸಾಯ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ಸ್ಥಳೀಯ ಕೃಷಿಕರಾದ ರಾಜು ಶೆಟ್ಟಿ, ಒಕ್ಕೂಟದ ಅಧ್ಯಕ್ಷ ವೇದಾವತಿರಾವ್, ಯುವ ರೈತ ವಿನೋದ್, ಶೌರ್ಯ ಟಿಮ್ ಸದಸ್ಯರಾದ ಕಾಳಿಂಗ ಪೂಜಾರಿ, ಊರಿನ ರೈತರು, ಪ್ರಗತಿಬಂದು ಸ್ವಸಹಾಯ ಸಂಘದ ಸದಸ್ಯರು , ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಕಾವಡಿ ವ್ಯಾಪ್ತಿಯ ಸೇವಾಪ್ರತಿನಿಧಿ ರಮೇಶ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ಜಯಲಕ್ಷಿ÷್ಮ ನಿರೂಪಿಸಿದರು.

ಬ್ರಹ್ಮಾವರ ತಾಲೂಕು ಪಾಂಡೇಶ್ವರ ವಲಯದ ಕಾವಡಿ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಕಾರ್ಯಕ್ರಮದ ಕುರಿತು ಕೃಷಿ ತರಬೇತಿ ಕಾರ್ಯಕ್ರಮವನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು. ಸಾಹೇಬರಕಟ್ಟೆ ವ್ಯವಸಾಯ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ಸ್ಥಳೀಯ ಕೃಷಿಕರಾದ ರಾಜು ಶೆಟ್ಟಿ, ಒಕ್ಕೂಟದ ಅಧ್ಯಕ್ಷ ವೇದಾವತಿರಾವ್, ಯುವ ರೈತ ವಿನೋದ್ ಮತ್ತಿತರರು ಇದ್ದರು.

   

Related Articles

error: Content is protected !!