Home » ಒಬ್ಬರಿಗೆ ಮಂಗನ ಕಾಯಿಲೆ ದೃಢ
 

ಒಬ್ಬರಿಗೆ ಮಂಗನ ಕಾಯಿಲೆ ದೃಢ

by Kundapur Xpress
Spread the love

ಉಡುಪಿ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಶಂಕೆ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದ 3 ಮಂದಿಯಲ್ಲಿ ಒಬ್ಬ ಮಹಿಳೆಗೆ ಕಾಯಿಲೆ ದೃಢಪಟ್ಟಿದ್ದು, ಇನ್ನಿಬ್ಬರು ಶಂಕೆಯಿಂದ ಮುಕ್ತರಾಗಿದ್ದಾರೆ. ಜ್ವರ ಪೀಡಿತರಾಗಿದ್ದ ಈ ಮೂವರ ಮಾದರಿಗಳನ್ನು ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳಹಿಸಲಾಗಿತ್ತು. ಅವರಲ್ಲಿ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಕೆಂಚನೂರಿನಲ್ಲಿ 58 ವರ್ಷದ ಒಬ್ಬ ಮಹಿಳೆಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಬಿಡುಗಡೆಗೊಂಡಿದ್ದಾರೆ. ಅವರಿಗೆ ಈ ಕಾಯಿಲೆ ಹೇಗೆ ಬಂತು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವರ ಸಂಪರ್ಕದಲ್ಲಿದ್ದವರಿಗೂ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಮೂವರು ವ್ಯಕ್ತಿಗಳ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ.ಗಡಾದ್ ತಿಳಿಸಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಒಬ್ಬರು ಮರಣ ಹೊಂದಿದ್ದರು. ಈ ಬಾರಿ ಕಾಡಂಚಿನ  ಜನರಲ್ಲಿ ಆರಂಭದಿಂದಲೇ ನಿಗಾ, ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾಡಂಚಿನ ಪ್ರದೇಶಗಳಲ್ಲಿ ಜ್ವರದ ಸೋಂಕು ಇದ್ದವರು ಮುನ್ನೆಚ್ಚರಿಕೆ ವಹಿಸುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಮಂಗಗಳ ಮೃತದೇಹ ಪತ್ತೆಯಾದಲ್ಲಿ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

   

Related Articles

error: Content is protected !!