ಕುಂದಾಪುರ : ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಹಾಗೂ ಫ್ರೆಂಡ್ಸ್ ಸರ್ಕಲ್ ರಿ.ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಪೈಲೇರಿಯ ರೋಗ ತಪಾಸಣಾ ಶಿಬಿರವು ಸಂಬಂಧಪಟ್ಟ ರಾತ್ರಿ ಸೇವಾ ನಿರತ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಕುಂದಾಪುರ ಪುರಸಭೆಯ 6ನೇ ವಾರ್ಡ್ ಪರಿಸರದಲ್ಲಿ ನಡೆಸಲಾಯಿತು. 120 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಖಾರ್ವಿ, ಗೌರವಾಧ್ಯಕ್ಷರಾದ ಶೀನಾ ಖಾರ್ವಿ, ಸಂಚಾಲಕರಾದ ಸುಕುಮಾರ್ ನಾಯ್ಕ್, ಪದಾಧಿಕಾರಿಗಳಾದ ಮನೋಹರ ಪುತ್ರನ್, ಗಣೇಶ ಆಚಾರಿ ,ಶಶಿಕಾಂತ್ ಖಾರ್ವಿ, ಶರತ್ ಖಾರ್ವಿ ,ಸುರೇಶ್ ಪುತ್ರನ್ , ಶೇಖರ್ ಪೂಜಾರಿ, ಲಕ್ಷ್ಮಣ್ ಖಾರ್ವಿ, ಗಣೇಶ್ ಸಾಲಿಯಾನ್ , ಸಂತೋಷ್ ಮಾಣಿಮನೆ, ಸುಕುಪಾಲ್, ಶಿವ ಪ್ರಸಾದ್, ಮಂಜುನಾಥ ಪೂಜಾರಿ, ಧನಪಾಲ್ ಪುತ್ರನ್ , ಚೇತನ್ ದೇವಾಡಿಗ ಉಪಸ್ಥಿತರಿದ್ದರು