Home » ಶ್ರೀಮತಿ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಂಸದ ಕೋಟ
 

ಶ್ರೀಮತಿ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಂಸದ ಕೋಟ

by Kundapur Xpress
Spread the love

ಉಡುಪಿ : ಭಾರತ ದೇಶದ ಸಂಪ್ರದಾಯಕ ಕಸುಬುದಾರರಿಗೆ ಅನುಕೂಲಕ್ಕಾಗಿ ತಂದ ವಿಶ್ವಕರ್ಮ ಯೋಜನೆಗೆ ಕರ್ನಾಟಕ ರಾಜ್ಯದಲ್ಲಿ 11 ಲಕ್ಷಕ್ಕೂ ಮಿಕ್ಕ ಅರ್ಜಿ ಸಲ್ಲಿಸಿದ್ದು ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಮಿಕ್ಕ ಆಸಕ್ತ ಬಡವರು ಯೋಜನೆಗೆ ಅರ್ಜಿ ಹಾಕಿದ್ದಾರೆ. ಈಗಾಗಲೇ 7 ಸಾವಿರಕ್ಕೂ ಮಿಕ್ಕ ಫಲಾನುಭವಿಗಳು ತರಬೇತಿ ಪಡೆದಿದ್ದು. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವಿಶ್ವಕರ್ಮ ಯೋಜನೆಯ ಕರಕುಶಲ ಕರ್ಮಿಗಳಿಗೆ ವಿಳಂಬವಿಲ್ಲದೆ ಸಾಲ ನೀಡಲು ನಿರ್ದೇಶನ ನೀಡುವಂತೆ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನಿಗೆ ಮನವಿ ಸಲ್ಲಿಸಿ ಚರ್ಚಿಸಿದರು.

ವಿಶ್ವಕರ್ಮ ಯೋಜನೆಗೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಉತ್ತಮವಾಗಿ ಸ್ಪಂದಿಸುತ್ತಿದ್ದರೂ ಇತರ ಕೆಲವು ಬ್ಯಾಂಕಿನ ಬ್ರಾಂಚ್ ಗಳಲ್ಲಿ ನಿಗದಿತ 250 ರೂಪಾಯಿಗಿಂತ ಹೆಚ್ಚು ಮೊತ್ತದ ಅಫೀತವಿತ್ ಕೇಳುವುದು, ಕೋವಿಡ್ ಸಂಕಷ್ಟಕಾಲದಲ್ಲಿ ತೆಗೆದು ಸಾಲ ಪಾವತಿ ಮಾಡಿದ್ದರೂ ಸಿಬಲ್ ಉಲ್ಲೇಖ ಮಾಡಿ ಸಾಲ ನಿರಾಕರಿಸುವುದು, ಕೆಲವೆಡೆ GST ಬಿಲ್ಲುಗಳನ್ನು ಕೇಳುತ್ತಾ ಇರುವುದರಿಂದ ವಿಶ್ವಕರ್ಮ ಕುಲ ಕಸುಬುದಾರರು ಸಾಲಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ವಿಳಂಬವಿಲ್ಲದೆ ಕೇಂದ್ರ ಸರಕಾರದ ಭದ್ರತೆ ಹೊಂದಿರುವ ವಿಶ್ವಕರ್ಮ ಯೋಜನೆಯ ಅರ್ಜಿದಾರರಿಗೆ ಸಾಲ ನೀಡುವಂತೆ ನಿರ್ದೇಶನ ನೀಡಬೇಕೆಂದು ಸಂಸದ ಕೋಟ ಮನವಿ ಮಾಡಿದರು.
ಮನವಿಯನ್ನು ಆಲಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ತಕ್ಷಣ ಕ್ರಮ ಜರುಗಿಸಿ ಸಾಲ ಸೌಲಭ್ಯ ನೀಡಲು ಆದೇಶಿಸುವುದಾಗಿ ತಿಳಿಸಿದ್ದಾರೆ.

 

Related Articles

error: Content is protected !!