ಕುಂದಾಪುರ:ಸ್ಥಳೀಯ ಬಹದ್ದೂರ್ ಶಾ ರಸ್ತೆಯ ನಿವಾಸಿಯಾದ ವಿಜಯ್ ಎಂಬವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಬೆಳಗ್ಗಿನ ಜಾವ 1.00ಗಂಟೆಗೆ ನುಸುಕಿನ ವೇಳೆಯಲ್ಲಿ ಮೀನುಗಾರಿಕೆಗೆ ದೋಣಿಯಲ್ಲಿ ತೆರಳಿದ್ದು ಅಲೆಯ ಅಬ್ಬರಕ್ಕೆ ದೋಣಿ ಮಗುಚಿದ ಪರಿಣಾಮ ಅಕಸ್ಮಿಕವಾಗಿ ನೀರಿಗೆ ಬಿದ್ದು ಉಸಿರು ಕಟ್ಟಿ ಮೃತಪಟ್ಟಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ