Home » ರಾಷ್ಟ್ರೀಯ ಪೋಷಣ ಮಾಸ
 

ರಾಷ್ಟ್ರೀಯ ಪೋಷಣ ಮಾಸ

by Kundapur Xpress
Spread the love

ಕೋಟೇಶ್ವರ  : ರಾಷ್ಟ್ರೀಯ ಪೋಷಣ ಮಾಸದ ಅಂಗವಾಗಿ  ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ, ಕೋಟೇಶ್ವರ ಇಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದಿಂದ ಸ್ಥಳೀಯವಾದ ತಾಜಾ ಆಹಾರ ಪ್ರದರ್ಶನವನ್ನು ಏರ್ಪಡಿಸಲಾಯಿತು. ಪ್ರದರ್ಶನದಲ್ಲಿ ಬೆಳಗಿನ ಉಪಹಾರ, ತಂಪು ಪಾನೀಯಗಳು, ಲಘು ಉಪಹಾರ, ತರಕಾರಿ ಹಣ್ಣುಗಳು ಹಾಗೂ ಊಟದ ತಟ್ಟೆಯಲ್ಲಿ ಯಾವ ರೀತಿ ಪೋಷಕಾಂಶಗಳು ಇರಬೇಕೆಂದು ತಿಳಿಸಲಾಯಿತು. ಪ್ರದರ್ಶನದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ ಇವರು ವಹಿಸಿಕೊಂಡಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿನಿತ್ಯವು ಇದೇ ರೀತಿ ಪೋಷಕಾಂಶ ಭರಿತ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು. ಪ್ರದರ್ಶನದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ರಾಮರಾಯ ಆಚಾರ್ಯ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಗಣೇಶ ಪೈ ಎಂ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ನಾಗರಾಜ ವೈದ್ಯ ಎಂ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮುನಿರತ್ನಮ್ಮ ಉಪಸ್ಥಿತರಿದ್ದರು. ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚೇತನಾ ಎಂ, ಇವರು ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪ್ರದರ್ಶನಕ್ಕೆ ಮಾರ್ಗದರ್ಶನ ಮಾಡಿರುತ್ತಾರೆ. ಪ್ರದರ್ಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪೌಷ್ಠಿಕ ಆಹಾರದ ಬಗ್ಗೆ ತಿಳಿದುಕೊಂಡರು.

   

Related Articles

error: Content is protected !!