101
ಕೋಟ : ಮಹಿಳಾ ಮಂಡಳಿ ಬಾಳ್ಕುದ್ರು ಮತ್ತು ಸರ್ವೋದಯ ಯುವಕ ಮಂಡಲ ಬಾಳ್ಕುದ್ರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಬಾಳ್ಕುದ್ರು ಇವರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ ಇತ್ತೀಚಿಗೆ ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಫೂಟ್ ಫಲ್ಸ್ ಥೆರಪಿ ಕುಂದಾಪುರ ಇದರ ಜಿಲ್ಲಾ ಮುಖ್ಯಸ್ಥ ನರೇಂದ್ರ ಕುಂದಾಪುರ ಫೂಟ್ ಫಲ್ಸ್ ಥೆರಪಿಯ ಕುರಿತು ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಫೂಟ್ ಫಲ್ಸ್ ಥೆರಪಿ ಕುಂದಾಪುರ ಉಮೇಶ್ ಬಂಗೇರ, ಮಹಿಳಾ ಮಂಡಳಿ ಬಾಳ್ಕುದ್ರು ಅಧ್ಯಕ್ಷೆ ರೇಖಾ ಸುವರ್ಣ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಪೂಜಾರಿ , ಸರ್ವೋದಯ ಯುವಕ ಮಂಡಲದ ಅಧಕ್ಷ ವಿಜೇತ್ ದೇವಾಡಿಗ ಹಾಗೂ ಸರ್ವ ಸದಸ್ಯರು ಹಾಜರಿದ್ದರು

