ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಅನ್ನಪೂರ್ಣ ಸೇವಾ ಬಂದು ಕುಂದಾಪುರ ಹಾಗೂ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ ಕುಂದಾಪುರದ ರೋಟರಿ ಭವನದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ
ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಸಮೀಪದ ಫೆರ್ರೀ ರಸ್ತೆಯಲ್ಲಿರುವ ಗಿಳಿಯಾರು ಕುಶಾಲ್ ಹೆಗ್ಡೆ ರೋಟರಿ ಭವನದಲ್ಲಿ ದಿನಾಂಕ 28.05.2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9.00 ರಿಂದ 12.00 ರ ವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ
ಈ ಉಚಿತ ದಂತ ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ ಹಾಗೂ ಹುಳುಕಿನ ಹಲ್ಲುಗಳಿಗೆ ಸಿಮೆಂಟನ್ನು ತುಂಬಿಸಲಾಗುವುದು ಅಲ್ಲದೇ ಹಲ್ಲುಗಳನ್ನು ಸ್ವಚ್ಛಗೊಳಿಸುವಿಕೆ ಅನಾರೋಗ್ಯಕರ ಹಲ್ಲುಗಳನ್ನು ಕೀಳುವುದು ಹಾಗೂ ಮಕ್ಕಳಿಗಾಗಿ ವಿಶೇಷ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ವೆಂಕಟೇಶ್ ಗಾಣಿಗರವರು ತಿಳಸಿದ್ದಾರೆ
ಶಿಬಿರಾರ್ಥಿಗಳು ಬೆಳಿಗ್ಗೆ ಬರುವಾಗ ತಿಂಡಿಯನ್ನು ತಿಂದು ಬರಬೇಕು 15 ವರ್ಷಕ್ಕಿಂತ ಕೆಳಗಿನವರೊಂದಿಗೆ ಪೋಷಕರು ಬರಬೇಕು ಹಾಗೆ ಸಕ್ಕರೆ ಕಾಯಿಲೆ ರಕ್ತದೊತ್ತಡ ಮುಂತಾದ ಕಾಯಿಲೆ ಇರುವವರು ತಪಾಸಣೆಗೈದು ವೈದ್ಯರ ಸಲಹೆ ಚೀಟಿಯನ್ನು ತನ್ನೊಂದಿಗೆ ತರಲೇಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ವೆಂಕಟೇಶ್ ಗಾಣಿಗರವರು ತಿಳಸಿದ್ದು ಸಾರ್ವಜನಿಕರು ಈ ಉಚಿತ ದಂತ ಚಿಕಿತ್ಸೆಯ ಶಿಬಿರದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ