ಕೋಟ : ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಪ್ರಸಾದ್ ನೇತ್ರಾಲಯ, ಕೋಟ ಸಿ. ಏ.ಬ್ಯಾಂಕ್ ಕೋಟ,ಇನ್ನರ್ ವೀಲ್ ಕೋಟ ಸಾಲಿಗ್ರಾಮ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೋಟ ಜಂಟಿ ಆಶ್ರಯದಲ್ಲಿ ಆ. 18ರಂದು ಕೋಟದ ಸಿ. ಎ.ಬ್ಯಾಂಕ್ ಸಭಾಂಗಣದಲ್ಲಿ ಉಚಿತ ನೇತ್ರಾ ತಪಾಸಣೆ ಹಾಗೂ ಪೆÇರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸಹಾಯಕ ಗವರ್ನರ್ ಮಮತ ಶೆಟ್ಟಿ ಉದ್ಘಾಟಿಸಿದರು.ಅತಿಥಿಯಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ,ಕಾರ್ಯದರ್ಶಿ ಚಂದ್ರ ಪೂಜಾರಿ,ಸಿ ಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ,ಇನ್ನರ್ ವೀಲ್ ಅಧ್ಯಕ್ಷ ಪುಷ್ಪಲತ,ಕಾರ್ಯದರ್ಶಿ ಪೂಜಾ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ,ಡಾ. ವಿಷ್ಣು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 146 ಜನ ಶಿಬಿರದ ಪ್ರಯೋಜನ ಪಡದುಕೊಂಡರು.