ಕೋಟ : 2024-2025ನೆ ಸಾಲಿನ ದೃಷ್ಠಿ ಪ್ರಧಾನ ಯೋಜನೆಯಡಿಯಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ,ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಗ್ರಾಮ ಪಂಚಾಯತ್ ಐರೋಡಿ,ಪಾರ್ವತಿ ಮಹಾಬಲ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಜಂಟಿ ಆಶ್ರಯದಲ್ಲಿ ಬಾಳ್ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೇತ್ರಾ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸಹಾಯಕ ಗವರ್ನರ್ ರಾಘವೇಂದ್ರ ಎಂ ಸಾಮಗ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟಕರಾದ ರಾಘವೇಂದ್ರ ಎಂ ಸಾಮಗ ಮಾತನಾಡಿ ರೋಟರಿ ಸೇವೆಯು ಅತ್ಯಂತ ಮಹತ್ವದ್ದು. ಪೋಲಿಯೋ, ಅಂಧತ್ವನಿವಾರಣಾ ಕಾಲರಾ ಪ್ಲೇಗು ಇಂಥಾ ಸಂದರ್ಭದಲ್ಲಿ ನಮ್ಮ ರೋಟರಿ ಇಂಟರ್‍ನ್ಯಾಷನಲ್ ಮನುಕುಲಕ್ಕೆ ದೊಡ್ಡ ಕೊಡುಗೆ ನೀಡಿದೆಯಲ್ಲದೆ ಕ್ಯಾಂಪ್ ಫಲಾನುಭವಿಗೆ ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಕನ್ನಡಕ ನೀಡುದಾಗಿ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಮಾತನಾಡಿ ಕ್ಯಾಂಪ್ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.