ಕೋಟ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಸಾಸ್ತಾನ ಕಾರ್ಯಕ್ಷೇತ್ರ ಗುಂಡ್ಮಿ ಹೈಸ್ಕೂಲ್ನಲ್ಲಿ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಜರಗಿತು.
ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ರಾಕೇಶ್ ರವರು ಉದ್ಘಾಟಿಸಿ ಮಾತನಾಡಿ ಗುದಾದ್ವಾರದ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಹಾಗೂ ಆಯುರ್ವೇದಿಕ್ ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಯಾದ ರಮೇಶ್ ಪಿಕೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಡಾ. ಸುಭಾಸ್ ಭಕ್ತ , ಗುಂಡ್ಮಿ ಹೈಸ್ಕೂಲ್ ಮುಖ್ಯೋಪಾಧ್ಯಾಯ ಸತೀಶ್ ಐತಾಳ್ , ವಲಯದ ಅಧ್ಯಕ್ಷೆ ರಾಧಾ, ಒಕ್ಕೂಟದ ಅಧ್ಯಕ್ಷೆ ಗಂಗಾವತಿ ಪಿ ರಾವ್ , ಜಿಲ್ಲಾ ಪ್ರಬಂಧಕರಾದ ಪ್ರದೀಪ್, ಶೌರ್ಯ ಘಟಕದ ಸಂಯೋಜಕರಾದ ಲಕ್ಷ್ಮೀಶ , ಯಕ್ಷ ಮಿತ್ರ ಸಂಘಟನೆಯ ಸದಸ್ಯರಾದ ನಾಗೇಶ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪುಷ್ಪಲತಾ, ಸ್ವಾಗತವನ್ನು ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ,ಧನ್ಯವಾದ, ಸೇವಾ ಪ್ರತಿನಿಧಿ ಶೋಭಾ ಗೈದರು .ಈ ಕಾರ್ಯಕ್ರಮದಲ್ಲಿ 148 ಸದಸ್ಯರು ತಪಾಸಣೆಗೆ ಒಳಪಟ್ಟಿದ್ದು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯವರು ಒಂದು ವಾರದ ಔಷಧಿಯನ್ನು ಉಚಿತವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ವಲಯದ ಸೇವಾ ಪ್ರತಿನಿಧಿವರಾದ ಅಕ್ಷಯ ,ಜ್ಯೋತಿ ,ಚಂದ್ರಕಲಾ ,ಮಾಲತಿ, ಮತ್ತು ಶಾರದ ರವರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.