ಕೋಟ : ಲಯನ್ಸ್ ಕ್ಲಬ್ ಕುಂದಾಪುರ ಅಮೃತದಾರ ಪ್ರಯೋಜಕತ್ವದಲ್ಲಿ ಲಯನ್ಸ್ ಕ್ಲಬ್ ಕೋಸ್ಟಲ್ ಹಾಗೂ ಶ್ರೀ ವಿಘ್ನೇಶ್ವರ ಯುವಕ ಮಂಡಲ ಬೆಟ್ಟಿಗಾರ ಇದರ ಸಹಯೋಗದೊಂದಿಗೆ ಆ.೪ರ ಭಾನುವಾರ ಬಸ್ರೂರು ಮೂರು ಕೈ ಹತ್ತಿರದ ನಿತ್ಯಾದರ ಹಾಲ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಂಡಿ ನೋವು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು. ಶಿಬಿರವನ್ನು ಆಯುರ್ವೇದ ವೈದ್ಯೆ ಸರಿತಾ ಉದ್ಘಾಟಿಸಿ ಶಿಬಿರದ ಪ್ರಯೋಜನದ ಬಗ್ಗೆ ಫಲಾನುಭವಿಗಳಿಗೆ ಹೇಳಿದರು. ಲಯನ್ಸ್ ಕ್ಲಬ್ ಅಮೃತಧಾರ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ವೈದ್ಯಾಧಿಕಾರಿ ಡಾ. ಧನೇಶ್ವರಿ, ಲಯನ್ಸ್ನ ವಲಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಶ್ರೀ ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷ ಮಂಜುನಾಥ ಮೊಗವೀರ, ಲಯನ್ಸ್ ನಿಕಟ ಪೂರ್ವ ಅಧ್ಯಕ್ಷೆ ಆಶಾ ಶೆಟ್ಟಿ, ಲಯನ್ಸ್ ಕ್ಲಬ್ ಅಮೃತಧಾರ ಸ್ಥಾಪಕಾಧ್ಯಕ್ಷೆ ಸರಸ್ವತಿ ಪುತ್ರನ್,ಸದಸ್ಯೆ ಚಂದ್ರಿಕಾಧನ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯ ವಸಂತರಾಜ್ ಶೆಟ್ಟಿ ನಿರೂಪಿಸಿದರು. ಕುಂದಾಪುರ ಪುರಸಭಾ ಸದಸ್ಯ ಶೇಖರ್ ಪೂಜಾರಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಚ್ಚಟ್ಟು ಧನ್ಯವಾದಗೈದರು. ಸಭಾ ಕಾರ್ಯಕ್ರಮದ ನಂತರ.ಸುಮಾರು 80 ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು