ಕೋಟ : ಕನ್ನಡಾಭಿಮಾನ ಕಾರ್ಯಕ್ರಮಗಳಲ್ಲಿ ಕನ್ನಡ ಮೊಳಗುವುದರ ಜತೆಗೆ ಮನೆ ಮನದಲ್ಲಿ ಮೊಳಗಲಿ ಎಂದು ಕನ್ನಡ ಸಾಹಿತ್ಯಪರಿಷತ್ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ನುಡಿದರು.
ಗುಂಡ್ಮಿ ರಥಬೀದಿಯಲ್ಲಿ ಫ್ರೆಂಡ್ಸ್ ಗುಂಡ್ಮಿ ಆಶ್ರಯದಲ್ಲಿ ಆರನೇ ವರ್ಷದ ಕನ್ನಡ ರಾಜ್ಯೋತ್ಸವ ಫ್ರೆಂಡ್ಸ್ ಗುಂಡ್ಮಿ ರಾಜ್ಯೋತ್ಸವ ಪುರಸ್ಕಾರ ಸಮಾರಂಭಮವನ್ನು ಉದ್ಘಾಟಿಸಿ ಮಾತನಾಡಿ ಭಾಷಾಭಿಮಾನದ ಕಂಪು ಪ್ರತಿಯೊಬ್ಬರಲ್ಲೂ ಪಸರಿಸಬೇಕು ಆ ಮೂಲಕ ಕನ್ನಡದ ಉಳಿವು ನಿತ್ಯನಿರಂರರವಾಗಬೇಕು,ಸAಘಟನೆಗಳು ಸಮಾಜ ಕಟ್ಟುವ ಕಾಯಕದ ಜತೆಗೆ ಭಾಷೆಯ ಉಳಿವಿನ ಬಗ್ಗೆ ಹೆಚ್ಚಿನ ಆದ್ಯತೆ ನೀಡುವಂತ್ತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗುಂಡ್ಮಿ ಅಧ್ಯಕ್ಷ ಸದಾಶಿವ ಶೆಟ್ಟಿಗಾರ ವಹಿಸಿದ್ದರು. ಸಮಾಜಸೇವಾ ವಿಭಾಗದಲ್ಲಿ ಉಡುಪಿ ಪೋಲಿಸ್ ಇಲಾಖೆಯಲ್ಲಿ ಎ.ಎಸ್ಐ ಕಾರ್ಯನಿರ್ವಹಿಸುತ್ತಿರುವ ಜಯಕರ ಐರೋಡಿ ಫ್ರೆಂಡ್ಸ್ ಗುಂಡ್ಮಿ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿತು.
ಮೆಸ್ಕಾಂ ಲೈನ್ಮೆನ್ ರಾಜು ಮಾದರ್ ,ರಾಷ್ಟ್ರಮಟ್ಡದ ಕ್ರೀಡಾಪಟು ಚಿನ್ಮಯ್ ಅಭಿನಂದಿಸಲಾಯಿತು.
ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.
ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ರವೀಂದ್ರ ಕಾಮತ್,ಫ್ರೆಂಡ್ಸ್ ಗುಂಡ್ಮಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಶ್ರೀಧರ್,ಉದ್ಯಮಿ ಡೇರಿಕ್ ಡಿಸೋಜ ಉಪಸ್ಥಿತರಿದ್ದರು.ಮಹಿಳಾ ಘಟಕದ ಸದಸ್ಯರಾದ. ದೀಪಾ ಪೂಜಾರಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿಗಾರ್ ನಿರೂಪಿಸಿದರು.ಮಹಿಳಾ ಘಟಕದ ಸದಸ್ಯರಾದ ವಿದ್ಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನಾಡಿ ಪುಟಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ,ತೆಕ್ಕಟ್ಟೆ ಕನ್ನುಕರೆ ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.