274
ಕುಂದಾಪುರ : ಕುಂದಾಪುರ ತಾಲೋಕಿನ ಸಿದ್ದಾಪುರದ ಆಸುಪಾಸಿನಲ್ಲಿ ಕಳೆದೆರಡು ದಿನಗಳಿಂದ ಸಂಚರಿಸುತ್ತಿದ್ದ ಒಂಟಿ ಸಲಗವನ್ನು ಕೊನೆಗೂ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ
ಕಳೆದೆರಡು ದಿನಗಳಿಂದ ಸಿದ್ದಾಪುರದಲ್ಲಿ ಆತಂಕ ಮೂಡಿಸಿದ್ದಒಂಟಿ ಸಲಗವನ್ನು ಇತರ ಮೂರು ಆನೆಗಳನ್ನು ಬಳಸಿಕೊಂಡು ಸೆರೆ ಹಿಡಿಯಲಾಯಿತು
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗ ಮತ್ತು ಶಂಕರನಾರಾಯಣ
ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು ಜೆಸಿಬಿ ಯಂತ್ರದ ಸಹಾಯದಿಂದ ಒಂಟಿ ಸಲಗವನ್ನು ಸೆರೆ ಹಿಡಿದಿದ್ದಾರೆ


