ಕಾಪು : ಶ್ರೀ ಗಣೇಶೋತ್ಸವ ಸಮಿತಿ ಪೊಲಿಪು ಇದರ 21ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾಲಾಜಿ ಯೋಗೀಶ್ ಶೆಟ್ಟಿ, ಕಾಪು ಪುರಸಭೆಯ ಸದಸ್ಯರಾದ ರಾಧಿಕಾ ಎಸ್ ಸುವರ್ಣ, ಕಿರಣ್ ಆಳ್ವ, ಉದ್ಯಮಿಗಳಾದ ಪ್ರಭಾಕರ್ ಪೂಜಾರಿ, ಪ್ರಭಾಕರ್ ಪೂಜಾರಿ ಕೈಪುಂಜಾಲು, ಪೊಲಿಪು ಮೋಗವೀರ ಮಹಾಸಭಾ ಅಧ್ಯಕ್ಷರಾದ ಶ್ರೀಧರ ಕಾಂಚನ್, ಪೊಲಿಪು ಮಹಿಳಾ ಮಂಡಳಿ ಉಪಾಧ್ಯಕ್ಷರಾದ ರತ್ನ, ಸರ್ಕಲ್ ಫೇಂಡ್ಸ್ ಪೊಲಿಪು ಅಧ್ಯಕ್ಷರಾದ ಪುರುಶೋತ್ತಮ ಪುತ್ರನ್, ಪೊಲಿಪು ಸಾರ್ವಜನಿಕರ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಧನಂಜಯ ಎಸ್ ಸಾಲ್ಯಾನ್ ಉಪಸ್ಥಿತರಿದ್ದರು.