ಕೋಟ: ಅನಾಥಾಶ್ರಮಗಳ ನಿರ್ವಹಣೆಯೇ ಕ್ಲಿಷ್ಟಕರ ಆದರೆ ಅದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಕ್ರೂಡಿಕರಣ ಅಗತ್ಯ ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಮೂಲಕ ನೆರವು ಯೋಜನೆ ಸಹಕಾರಿಯಾಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.
ತಮ್ಮ 76ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ,ವಿಕಲಚೇತನ,ಅಶಕ್ತರಿಗೆ ಸುಮಾರು 6ಲಕ್ಷ ರೂ ಅಧಿಕ ಮೌಲ್ಯದ ಧನಸಹಾಯದ ಚಕ್ ವಿತರಿಸಿ ಮಾತನಾಡಿ ಕಳೆದ ವರ್ಷ ಅಮೃತಮಹೋತ್ಸವದ ಹಿನ್ನಲೆಯಲ್ಲಿ ಒಂದಿಷ್ಟು ಆಶ್ರಮಗಳಿಗೆ ನೆರವು ನೀಡಲಾಗಿದ್ದು ಅದೇ ರೀತಿ ಈ ವರ್ಷವು ಹಮ್ಮಿಕೊಂಡಿದ್ದು ಅನಾಥಾಶ್ರಮಗಳು ನೆರಳು ನೀಡುವ ಧಾಮಗಳಾಗಿ ಕಾರ್ಯನಿರ್ವಹಿಸುತ್ತಿವೆ ಈಕಾರ್ಯ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಇದೇ ವೇಳೆ ಒಟ್ಟು 13ಅನಾಥಾಶ್ರಮ,ವಿಕಲಚೇತನ,ಅಶಕ್ತರಿಗೆ ಚಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.
ಈ ವೇಳೆ ಆಶ್ರಮಗಳ ಮುಖ್ಯಸ್ಥರು,ಜನತಾ ಸಂಸ್ಥೆಯ ಸಿಬ್ಬಂದಿಗಳು, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ತಮ್ಮ 76ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ,ವಿಕಲಚೇತನ,ಅಶಕ್ತರಿಗೆ ಸುಮಾರು 6ಲಕ್ಷ ರೂ ಅಧಿಕ ಮೌಲ್ಯದ ಧನಸಹಾಯದ ಚಕ್ ವಿತರಿಸಿದರು. ಈ ವೇಳೆ ಆಶ್ರಮಗಳ ಮುಖ್ಯಸ್ಥರು,ಜನತಾ ಸಂಸ್ಥೆಯ ಸಿಬ್ಬಂದಿಗಳು, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು.