Home » ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಒಣಮೇವು ಹಸ್ತಾಂತರ
 

ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಒಣಮೇವು ಹಸ್ತಾಂತರ

ಗೆಳೆಯರ ಬಳಗ ಕಾರ್ಕಡ

by Kundapur Xpress
Spread the love

ಕೋಟ : ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ನೇತೃತ್ವದಲ್ಲಿ ಕಾರ್ಕಡ ಗ್ರಾಮಸ್ಥರ ಮೂಲಕ ಸಂಗ್ರಹಿಸಿದ ಎರಡು ಲೋಡ್ ಒಣಮೇವುನ್ನು ಭಾನುವಾರ ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ಹಸ್ತಾಂತರಿಸಲಾಯಿತು.
ಈ ಕೊಡುಗೆಯನ್ನು ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದ ಗೋಶಾಲೆಯ ವ್ಯವಸ್ಥಾಪಕ ಸುಬ್ರಹ್ಮಣ್ಯರವರು ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರ ಸಮಾಜ ಸೇವೆಯನ್ನು ಹಾಗೂ ಗೆಳೆಯರ ಬಳಗದ ಸದಸ್ಯರಿಗೆ ಗೋವಿನ ಮೇಲಿರುವ ಪ್ರೀತಿ – ಭಕ್ತಿ ಅವರ ಈ ಸೇವೆಗೆ ಸಾಕ್ಷಿ. ಈ ಕಾರ್ಯಕ್ಕೆ ಗೋಮಾತೆ ಮತ್ತು ಶ್ರೀ ಕೃಷ್ಣ ಮುಖ್ಯಪ್ರಾಣರು ಅನುಗ್ರಹಿಸಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಗೋ ಶಾಲೆಯ ವಿಶ್ವಸ್ಥ ಮಂಡಳಿಯ ಸಿ.ಎ ರವಿರಾವ್ ,ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ ಕೆ. ಶೀನ, ಕೆ. ಜಗದೀಶ ಆಚಾರ್ಯ,ಕೆ. ಶೇಖರ ಬಡಾಹೋಳಿ, ಹಾಗೂ ಕೆ .ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

 

Related Articles

error: Content is protected !!