ಕೋಟ : ಮನುಷ್ಯ ಜೀವನದಲ್ಲಿ ನಾನು ಎನ್ನುವುದು ಬಿಟ್ಟು ನಾವು ಎನ್ನುವುದು ಮೈಗೂಡಿಸಿಕೊಂಡು ಎಲ್ಲರೊಂದಿಗೆ ಪ್ರೀತಿಯಿಂದ ಒಂದಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತೆಕ್ಕಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ನುಡಿದರು.
ಕುಂಭಾಶಿಯ ಗಾಯಿತ್ರಿ ಸಭಾಭವನದಲ್ಲಿ ತೆಕ್ಕಟ್ಟೆ ರೋಟರಿ ಕ್ಲಬ್‌ನ ಗವರ್ನರ್ ಭೇಟಿ ಹಿನ್ನಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಕೊರ್ಗಿ ವಿಠಲ ಶೆಟ್ಟರನ್ನು ಸಮ್ಮಾನಿಸಿ ಮಾತನಾಡಿದರು.
ಈ ಭೂಮಿ ಮೇಲೆ ಹುಟ್ಟಿದ ಮನುಷ್ಯ ಜೀವಿಯೊಂದಿಗೆ ಪ್ರಾಣಿಪಕ್ಷಿಗಳು ಗಿಡಮರಗಳನ್ನು ಪ್ರೀತಿಯಿಂದ ಸಂರಕ್ಷಿಸಿದರೆ ಮಾತ್ರ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಸಮ್ಮಾನ ಸ್ವೀಕರಿಸಿದ ಸಮಾಜ ಸೇವಕರಾದ ಕೊರ್ಗಿ ವಿಠಲ ಶೆಟ್ಟಿಯವರು ನುಡಿದರು ರೋಟರಿ ಜಿಲ್ಲಾ ಗವರ್ನರ್ ದೇವಾನಂದ್ ದಂಪತಿಗಳು ಉಪಸ್ಥಿತರಿದ್ದು ಕ್ಲಬ್‌ನ ಸಮಾಜಮುಖಿ ಕಾರ್ಯಗಳನ್ನು ಕಂಡು ಸಂತಸದಿಂದ ಶ್ಲಾಘಿಸಿದರು.
ಸಹಾಯಕ ಗವರ್ನರ್ ಮಮತಾ ಶೆಟ್ಟಿ ವಲಯ ಸೇನಾನಿ ಗಣೇಶ್ ಹೊಳ್ಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿ ಶೋಭಿತ್ ಆಚಾರ್ಯ ಮತ್ತು ಶಿಕ್ಷಣದಲ್ಲಿ ವಿಶೇಷ ಸಾಧನೆಗೈದ ಸನಾತನ್ ಪುರಾಣಿಕರನ್ನು ಸಮ್ಮಾನಿಸಲಾಯಿತು
ರೋಟರಿ ಕ್ಲಬ್‌ನ ರಾಜೀವ ಶೆಟ್ಟಿ ಮಲ್ಯಾಡಿ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಕೃಷ್ಣ ಮೊಗವೀರ ವರದಿ ವಾಚಿಸಿದರು. ವಿಜಯಕುಮಾರ್ ಶೆಟ್ಟಿ ,ರಾಜಗೋಪಾಲಪುರಾಣಿಕ ಸಮ್ಮಾನಿತರ ಪರಿಚಯ ವಾಚಿಸಿದರು. ಮುಂದಿನ ಸಾಲಿನ ಅಧ್ಯಕ್ಷ ಸುಧೀರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು . ಸದಸ್ಯರಾದ ಹೆರಿಯ ಮಾಸ್ಟರ್ ಮತ್ತು ರಾಘುವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.