Home » ಬೈಂದೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ
 

ಬೈಂದೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ

: ಶಾಸಕ ಗುರುರಾಜ್ ಗಂಟೆ ಹೊಳೆ ಮನವಿ

by Kundapur Xpress
Spread the love

ಬೈಂದೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ : ಶಾಸಕ ಗುರುರಾಜ್ ಗಂಟೆ ಹೊಳೆ ಮನವಿ                            

ಬೈಂದೂರು : ಬೈಂದೂರಿನಲ್ಲಿ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡುವಂತೆ  ಸದನದಲ್ಲಿ ಶಾಸಕ ಗುರುರಾಜ್ ಗಂಟೆ ಹೊಳೆ ಮನವಿ ಮಾಡಿದ್ದಾರೆ                            

 ಶಾಸಕ ಗುರುರಾಜ್ ಗಂಟೆ ಹೊಳೆಯವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನೇಕ ಬೇಡಿಕೆಗಳ ಗಮನ ಸೆಳೆದಿದ್ದು ವಸತಿ ನಿಲಯ ಹಾಗೂ ಪರಿಶಿಷ್ಟ ವರ್ಗದ ಜನರ ಹಿತಾಸಕ್ತಿ ಕುರಿತು ಸಮಗ್ರ ಚರ್ಚೆಯನ್ನು ಅಧಿವೇಶನದಲ್ಲಿ ಧ್ವನಿಯೆತ್ತಿದ್ದರು  ಪ್ರಸ್ತುತ ಬೈಂದೂರು ಜನತೆಯ ಪ್ರಮುಖ ಬೇಡಿಕೆಯಾದ ಸುಸಜ್ಜಿತ ಹಾಗೂ ಗುಣಮಟ್ಟದ ಸರಕಾರಿ ತಾಲೂಕು ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಪ್ರಶ್ನೋತ್ತರ ವೇಳೆಯಲ್ಲಿ ಮುಖ್ಯಮಂತ್ರಿಯವರಲ್ಲಿ ಕೋರಿಕೆಯನ್ನು ಮಂಡಿಸಿದರು  

ಇನ್ನೂ ಬೈಂದೂರಿನ ವ್ಯಾಪ್ತಿಯಲ್ಲಿ ವಾಹನ ಅಪಘಾತ ಹೃದಯ ಸಂಬಂಧ ಕಾಯಿಲೆಯ ಚಿಕಿತ್ಸೆಗಾಗಿ 60 ಕಿಲೋಮೀಟರ್ ದೂರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡುವ ಪರಿಸ್ಥಿತಿ ಇದ್ದುದರಿಂದ   ಸಮಸ್ಯೆಯನ್ನು ದೂರ ಮಾಡಲು ಬೈಂದೂರು ತಾಲೂಕಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ತೀರಾ ಅಗತ್ಯವಿದ್ದು ಬೈಂದೂರು ತಾಲೂಕು ಮಟ್ಟದಲ್ಲಿ ಒಂದು ಸುಸಜ್ಜಿತ  ಆಸ್ಪತ್ರೆ ನಿರ್ಮಾಣ ಮಾಡಿಕೊಡುವ ಬಗ್ಗೆ  ಮನವಿ ಸಲ್ಲಿಸಿದ್ದಾರೆ ಸರಕಾರದಿಂದ  ಮಾಡಿಕೊಡುವುದು ಕಷ್ಟವಾದರೆ  ಖಾಸಗಿ ಸಂಸ್ಥೆಗಳ ಸಹಭಾಗಿತ್ವಲಾದರೂ ಶೀಘ್ರವೇ ಮಾಡಿಕೊಡಿ ಎಂದು ಶಾಸಕ ಗುರುರಾಜ್ ಗಂಟೆ ಹೊಳೆ ಮನವಿ ಸಲ್ಲಿಸಿದರು                                 

ವರದಿ : ಈಶ್ವರ್ ಸಿ ನಾವುಂದ

   

Related Articles

error: Content is protected !!