Home » ಕಾರ್ಕಡದಲ್ಲಿ ಗ್ರಾಮ ಸಾಹಿತ್ಯ ಸಮ್ಮೇಳನ ಉದ್ಘಾಟಿನೆ
 

ಕಾರ್ಕಡದಲ್ಲಿ ಗ್ರಾಮ ಸಾಹಿತ್ಯ ಸಮ್ಮೇಳನ ಉದ್ಘಾಟಿನೆ

by Kundapur Xpress
Spread the love

ಕೋಟ :  ಗ್ರಾಮಗಳಲ್ಲೂ ಕನ್ನಡಾಸಕ್ತಿ, ಸಾಹಿತ್ಯ ಅಭಿರುಚಿ ಮೂಡಿದಾಗ ಕನ್ನಡದ ಕಂಪು ಸುತ್ತೆಲ್ಲವೂ ಹರಡಲು ಸಾಧ್ಯ. ಇತರ ಸಮ್ಮೇಳನಗಳಂತೆ ಗ್ರಾಮೀಣ ಸಾಹಿತ್ಯ ಸಮ್ಮೇಳನಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಬೇಕು ಹಾಗೂ ಸರಕಾರಗಳು ಕೂಡ ಇದಕ್ಕೆ ಯೋಜನೆ ರೂಪಿಸಬೇಕು ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಹೇಳಿದರು.
ಬ್ರಹ್ಮಾವರ ತಾಲೂಕು ಕ.ಸಾ.ಪ. ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ.ಸಾ.ಪ. ಮತ್ತು ಕೋಟ ಹೋಬಳಿ ಕ.ಸಾ.ಪ. ಸಹಕಾರದೊಂದಿಗೆ ಕಾರ್ಕಡದಲ್ಲಿ ನಡೆದ ಗ್ರಾಮೀಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷರಾಮಚಂದ್ರ ಐತಾಳ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಜಿಲ್ಲಾ ಮಟ್ಟ ತಾಲೂಕು ಮಟ್ಟದ ಜತೆ-ಜತೆಗೆ ಗ್ರಾಮೀಣ ಭಾಗಗಳಲ್ಲೂ ನಡೆಯಬೇಕು. ಈ ಮೂಲಕವಾಗಿ ಸಂಸ್ಕೃತಿ ಸಂಸ್ಕಾರಗಳ ಮೂಲ ಬೇರಾಗಿರುವ ಹಳ್ಳಿಹಳ್ಳಿಗಳಲ್ಲೂ ಸಾಹಿತ್ಯಾಸಕ್ತಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಚಿತ್ರನಟ ರಘು ಪಾಂಡೇಶ್ವರ ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಕಾಶ್ ಗಾಣಿಗ ಕಾರ್ಕಡ, ಶ್ರೀಕಾಂತ ಐತಾಳ, ಆನಂದ ಪೂಜಾರಿ, ಚಂದ್ರ ಬಡಾಹೋಳಿ, ಸುರೇಂದ್ರ ಹೊಳ್ಳ ಲಕ್ಷ್ಮಣ ಪೂಜಾರಿ, ಅದೈತ್ ಅವರನ್ನು ಗೌರವಿಸಲಾಯಿತು.

ಗ್ರಾಮ ಇತಿಹಾಸ ವಿಮರ್ಶೆಯನ್ನು ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಸೋಮಯಾಜಿ ನಡೆಸಿದರು. ಯಶೋದಾ ಹೊಳ್ಳ ವನಿತಾ ಉಪಾಧ್ಯ ತಂಡದವರು ಭಜನೆ, ಸಂಕೀರ್ತನೆ ನಡೆಸಿದರು. ಗ್ರಾಮೀಣ ಕಂಠಸ್ಥ ಸಾಹಿತ್ಯ ವಾಚನ, ಕುಂದಗನ್ನಡ ವಿಮರ್ಶೆ, ಕಾರ್ತಿಕ ಮಾಸದ ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ಕೋಟ ಹೋಬಳಿ ಘಟಕದ ಅಧ್ಯಕ್ಷ ಅಚ್ಯುತ್ ಪೂಜಾರಿ, ಕ.ಸಾ.ಪ. ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಶೆಟ್ಟಿ ನರೇಂದ್ರ ಕುಮಾರ್ ಕೋಟ, ಮೋಹರ ಪಿ. ಸೀತಾರಾಮ ಸೋಮಯಾಜಿ ಇದ್ದರು. ವೆಂಕಟಕೃಷ್ಣ ಸೋಮಯಾಜಿ ಸ್ವಾಗತಿಸಿ, ಜ್ಯೋತಿ ಕೃಷ್ಣ ಪೂಜಾರಿ ನಿರೂಪಿಸಿ, ಪ್ರಶಾಂತ್ ಶೆಟ್ಟಿ ವಂದಿಸಿದರು.

 

Related Articles

error: Content is protected !!