Home » ಪಿಡಿಓ ಕಾರ್ಯದರ್ಶಿ ಮುಸುಕಿನ ಗುದ್ದಾಟ : ನಾಗರಿಕರ ಪರದಾಟ
 

ಪಿಡಿಓ ಕಾರ್ಯದರ್ಶಿ ಮುಸುಕಿನ ಗುದ್ದಾಟ : ನಾಗರಿಕರ ಪರದಾಟ

ಗುಲ್ವಾಡಿ ಗ್ರಾಮ ಪಂಚಾಯತ್

by Kundapur Xpress
Spread the love

ಬೈಂದೂರು : ಇತ್ತೀಚಿಗೆ ಹಲವು ದಿನಗಳಿಂದ ಬೈಂದೂರು ವಿಧಾನ ಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕಾರ್ಯದರ್ಶಿಯ ಮುಸುಕಿನ ಗುದ್ದಾಟದಲ್ಲಿ ಗ್ರಾಮಸ್ಥರ ಪರದಾಟ ಎದುರಾಗಿದೆ, ಹಲವು ದಿನಗಳಿಂದ ಗ್ರಾಮಸ್ಥರ ಯಾವುದೇ ಕೆಲಸ ಆಗದೆ. ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿದುಬಂದಿದೆ.

ಗುಲ್ವಾಡಿ ಗ್ರಾಮ ಪಂಚಾಯಿತಿನಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟದಲ್ಲಿ ಗ್ರಾಮಸ್ಥರಿಗೆ ಯಾವುದೇ ತುರ್ತು ಕಾಮಗಾರಿ ಆಗದ ಪ್ರಸಂಗ ಎದುರಾಗಿದೆ, ಹಾಗೂ ಕಳೆದ 15 ದಿನಗಳ ಹಿಂದೆ ಹಳೆಯ ಅಂಗನವಾಡಿ ಕಟ್ಟಡದಲ್ಲಿ ಶೇಖರಣೆ ಮಾಡಿದ ಕಸದ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಾ H ರವರು ನೇತೃತ್ವದಲ್ಲಿ ಜೆಸಿಬಿ ಮೂಲಕ ಕಸ ವಿಲೇವಾರಿ ಮಾಡಿದ ಕಾಮಗಾರಿಗೆ ಬಿಲ್ ಪಾಸು ಮಾಡದೆ ಮುಜುಗರಕ್ಕೆ ಒಳಗಾದ ಪ್ರಸಂಗ ನಡೆದಿದೆ.

ತಕ್ಷಣ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು, ಇತ್ತ ಕಡೆ ಗಮನಹರಿಸಿ ಈ ಸಮಸ್ಯೆ ಬಗ್ಗೆ ಹರಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

 

Related Articles

error: Content is protected !!