ಕುಂದಾಪುರ : ಪ್ರತಿ ವರ್ಷವೂ ವನಮಹೋತ್ಸವ ನಡೆಯುತ್ತದೆ. ಆದರೆ ನೆಟ್ಟ ಗಿಡಗಳು ಮತ್ತೆ ಕಾಣಸಿಗುವುದಿಲ್ಲ. ವನ್ಯಜೀವಿಗಳಿಂದು ನಾಡ ಸೇರಲು ಅವಶ್ಯಕ ಮರ ಗಿಡಗಳ ಭಾರಿ ಕೊರತೆ ಕಾರಣ. ಗಿಡಮರಗಳ ಅಳಿವು ರಾಷ್ಟ್ರೀಯ ನಷ್ಟ ಎಂದು ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊತ್ತೇಸರ ಬಿ. ಅಪ್ಪಣ್ಣ ಹೆಗ್ಡೆ ನುಡಿದರು ಅವರು ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯು ಅವರ 89ನೇ ಹುಟ್ಟುಹಬ್ಬದ ಅಂಗವಾಗಿ ರಚಿಸಿರುವ ಅಮೃತವನದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಉಪ ವಲಯದ ಎ ಸಿ ಎಫ್ ಶ್ರೀಧರ ಮಾತನಾಡಿ, ನಾಗರಿಕರು ತಮ್ಮ ಹುಟ್ಟುಹಬ್ಬದ ಸಂದರ್ಭ ಈ ರೀತಿ ಗಿಡ ನೆಡುವ ಸಂಪ್ರದಾಯ ರೂಢಿಸಿಕೊಂಡರೆ, ಅದು ಪರಿಸರಕ್ಕೆ ನಾವು ಕೊಡ ಮಾಡುವ ದೊಡ್ಡ ಕೊಡುಗೆ ಆಗಲಿದೆ ಎಂದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯ ನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು